ಮುಘಲ್ ಸಾರೈ : ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ- ಎನ್ ಆರ್ ಸಿ ಕರಡು ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟವಾಗಿ ತಮ್ಮ ನಿಲುವು ವ್ಯಕ್ತಪಡಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದ ಮುಘಲ್ ಸಾರೈನಲ್ಲಿಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರಸರ್ಕಾರ ಎನ್ ಆರ್ ಸಿ ಕರಡು ಸಿದ್ಧಪಡಿಸಿದೆ. ಆದರೆ.ಪ್ರತಿಪಕ್ಷಗಳು ಇಂದು ದೇಶವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿವೆ ಅಸ್ಸಾಂನಿಂದ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಯರನ್ನು ಓಡಿಸಬೇಕೆಂಬುದು ಎನ್ ಆರ್ ಸಿಯ ಉದ್ದೇಶವಾಗಿದೆ ಎಂದರು.
ಆದಾಗ್ಯೂ, ಎನ್ ಆರ್ ಸಿಯನ್ನು ಅನುಷ್ಠಾನಗೊಳಿಸದಂತೆ ಮಮತಾ ಬ್ಯಾನರ್ಜಿ ಹೇಳುತ್ತಾರೆ. ಕಾಂಗ್ರೆಸ್ ಕೂಡಾ ಅದೇ ನಂಬಿಕೆ ಹೊಂದಿದೆ. ಎನ್ ಆರ್ ಸಿ ಈ ದೇಶದಲ್ಲಿರಬೇಕಾ ಅಥವಾ ಬೇಡ ಎಂಬ ಬಗ್ಗೆ ರಾಹುಲ್ ಗಾಂಧಿ ಏನನ್ನೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಅಮಿತ್ ಶಾ ಹೇಳಿದರು.
ಬಾಂಗ್ಲಾದೇಶಿಯರನ್ನು ದೇಶದೊಳಗೆ ಇಟ್ಟುಕೊಳ್ಳತ್ತೀರಾ ಅಥವಾ ಅವರನ್ನು ಹೊರಗೆ ಕಳುಹಿಸುತ್ತೀರಾ ಎಂದು ನಿರ್ಧರಿಸಿ ಎಂದು ಎಸ್ಪಿ, ಬಿಎಸ್ ಪಿ, ಕಾಂಗ್ರೆಸ್ ಪಕ್ಷವನ್ನು ಕೇಳಲು ಬಯಸುತ್ತೇನೆ ಎಂದು ಪ್ರತಿಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ಕಲ್ಪಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ನಂತರ ರಾಜ್ಯಸಭೆಗೆ ಹೋದರೆ ಅಲ್ಲಿಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತಾ ಅಥವಾ ಇಲ್ಲವಾ ಎಂಬುದನ್ನು ರಾಹುಲ್ ಗಾಂಧಿ ಅವರನ್ನು ಕೇಳುತ್ತೇನೆ. ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಉತ್ತರ ಪ್ರದೇಶದಲ್ಲಿ ಮಾಫಿಯಾ ನಿಂತಿದ್ದು, ಉತ್ತಮ ಪ್ರಗತಿ ಕಾಣುತ್ತಿದೆ ಎಂದು ಅಮಿತ್ ಶಾ ಹೇಳಿದರು.
Advertisement