ಪಾಕ್'ಗೆ ಹೋಗಿ ಎನ್ನುತ್ತಿರುವವರಿಗೆ ದೇಶದ ಬಗ್ಗೆಯೇ ಅರಿವಿಲ್ಲ: ಶರದ್ ಪವಾರ್

ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುತ್ತಿರುವವರಿಗೆ ಪಾಕಿಸ್ತಾನ ಹಾಗೂ ಭಾರತ ದೇಶಗಳ ಬಗ್ಗೆ.ಯೇ ಅರಿವಿಲ್ಲ ಎಂದು ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾನುವಾರ ಹೇಳಿದ್ದಾರೆ...
ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್
ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್
ಪುಣೆ: ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುತ್ತಿರುವವರಿಗೆ ಪಾಕಿಸ್ತಾನ ಹಾಗೂ ಭಾರತ ದೇಶಗಳ ಬಗ್ಗೆ.ಯೇ ಅರಿವಿಲ್ಲ ಎಂದು ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾನುವಾರ ಹೇಳಿದ್ದಾರೆ. 
ಹಿರಿಯ ಪತ್ರಕರ್ತ ಸಂಜರ್ ಅವಾತೆಯವರು ಬರೆದಿರುವ 'ವಿ ದ ಚೇಂಜ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, ಮುಸ್ಲಿಮರು ಪಾಕಿಸ್ತಾನಕ್ಕ ಹೋಗಿ ಎಂದು ಹೇಳುತ್ತಿರುವ ಜನರಿಗೆ ಭಾರತ ಹಾಗೂ ಪಾಕಿಸ್ತಾನ ದೇಶಗಳ ಬಗ್ಗೆಯೇ ತಿಳಿದಿಲ್ಲ ಎಂದು ಹೇಳಿದ್ದಾರೆ. 
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ಆ ಅಭಿಪ್ರಾಯ ಮತ್ತೊಬ್ಬ ವ್ಯಕ್ತಿಗೆ ಇಷ್ಟವಾಗದೇ ಹೋದರೆ, ಆತನನ್ನು ಪಾಕಿಸ್ತಾನಕ್ಕೆ ಹೋಗು ಎಂದು ಹೇಳುತ್ತಾರೆ. ದೇಶದಲ್ಲಿರುವ ಹಕ್ಕು ಆತನಿಗಿಲ್ಲ ಎಂದು ಹೇಳುತ್ತಾರೆ. ಪಾಕಿಸ್ತಾನವೆಂದರೇನು? ದೇಶ ವಿಭಜನೆಗೊಳ್ಳುವುದಕ್ಕೂ ಮುನ್ನ ಪಾಕಿಸ್ತಾನ ಕೂಡ ಭಾರತದ ಭಾಗವಾಗಿತ್ತು. 
ವಿಭಜನೆ ವೇಳೆ ಪಾಕಿಸ್ತಾನದಲ್ಲಿದ್ದವರೂ ಹಿಂದುಗಳಾಗಿದ್ದರು. ಇಲ್ಲಿದ್ದವರೇ ಪಾಕಿಸ್ತಾನಕ್ಕೆ ಹೋಗಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗಲು ನನಗೆ ಹಲವು ಬಾರಿ ಅವಕಾಶಗಳು ದೊರಕಿತ್ತು. ಪಾಕಿಸ್ತಾನದಲ್ಲಿ ಸಾಮಾನ್ಯ ಜನರನ್ನು ಭೇಟಿ ಮಾಡಿದ್ದೆ. ಭಾರತೀಯರ ಬಗ್ಗೆ ಅವರಲ್ಲಿರುವ ಪ್ರೀತಿಯನ್ನು ನೋಡಿದ್ದೆ. ಪಾಕಿಸ್ತಾನ ಪ್ರಜೆಗಳ ಹಲವಾರು ಸಂಬಂಧಿಕರು ಭಾರತದಲ್ಲಿದ್ದಾರೆ. ಆದರೆ, ಎರಡು ರಾಷ್ಟ್ರಗಳ ವೈಷಮ್ಯದಿಂದಾಗಿ ಭಾರತಕ್ಕೆ ಬರುವ ಅವಕಾಶಗಳು ಅವರಿಗೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com