ಮಾಯಾವತಿ/ಮಮತಾ ಬ್ಯಾನರ್ಜಿ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ?: ಅಚ್ಚರಿ ಮೂಡಿಸಿದ ಹೆಚ್ ಡಿ ದೇವೇಗೌಡರ ಹೇಳಿಕೆ

ಬಿಜೆಪಿ ವಿರುದ್ಧ ದೃಢ ಮೈತ್ರಿಗೆ ಕರೆ ನೀಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಮತಾ ಬ್ಯಾನರ್ಜಿ ಅಥವಾ ಮಾಯಾವತಿ ಮಹಾಮೈತ್ರಿಕೂತದ ಪ್ರಧಾನಿ ಅಭ್ಯರ್ಥಿಗಳಾಗುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಯಾವತಿ/ಮಮತಾ ಬ್ಯಾನರ್ಜಿ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ: ಅಚ್ಚರಿ ಮೂಡಿಸಿದ ಹೆಚ್ ಡಿ ದೇವೇಗೌಡರ ಹೇಳಿಕೆ
ಮಾಯಾವತಿ/ಮಮತಾ ಬ್ಯಾನರ್ಜಿ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ: ಅಚ್ಚರಿ ಮೂಡಿಸಿದ ಹೆಚ್ ಡಿ ದೇವೇಗೌಡರ ಹೇಳಿಕೆ
ಬಿಜೆಪಿ ವಿರುದ್ಧ ದೃಢ ಮೈತ್ರಿಗೆ ಕರೆ ನೀಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಮತಾ ಬ್ಯಾನರ್ಜಿ ಅಥವಾ ಮಾಯಾವತಿ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಗಳಾಗುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
2019 ರ ಲೋಕಸಭಾ ಚುನವಾಣೆಯ ಬಗ್ಗೆ ಮಾತನಾಡಿರುವ ಹೆಚ್ ಡಿ ದೇವೇಗೌಡರ ಈ ಪ್ರತಿಕ್ರಿಯೆ "ಚುನಾವಣೆಯ ಬಳಿಕವಷ್ಟೇ ಪ್ರಧಾನಿ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಯ ಬೆನ್ನಲ್ಲೇ ಬಂದಿರುವುದು ಮಹತ್ವ ಪಡೆದುಕೊಂಡಿದೆ. 
ಕಾಂಗ್ರೆಸ್ ಪ್ರಕಾರ ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿದರೆ ಬಿಜೆಪಿ ವಿರುದ್ಧ ರಚಿಸಲಾಗುತ್ತಿರುವ ಮಹಾಘಟಬಂಧನದ ಒಗ್ಗಟ್ಟಿಗೆ ಹೊಡೆತ ಬೀಳುತ್ತದೆ. ಆದರೆ ದೇವೇಗೌಡರು ಮಾತ್ರ ಈ ಬಗ್ಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದು, ಮಮತಾ ಬ್ಯಾನರ್ಜಿ, ಮಾಯಾವತಿ ಪ್ರಧಾನು ಅಭ್ಯರ್ಥಿಯಾಗುವುದರ ಬಗ್ಗೆ ಯಾರೂ ಊಹಿಸದಂತಹ, ಅಚ್ಚರಿಯ ಹೇಳಿಕೆ ನೀಡಿದ್ದಾರೆ. 
ಮಾಯಾವತಿ/ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿ ಯಾಕಾಗಬಾರದು ಎಂಬ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ತಮ್ಮ ವಿರೋಧವಿಲ್ಲ ಎಂದಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ದೇವೇಗೌಡರು ಈ ಬಗ್ಗೆ ಮಾತನಾಡಿದ್ದು, ಎನ್ ಆರ್ ಸಿ ವಿವಾದದ ನಂತರ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಮೈತ್ರಿಕೂಟ ರಚನೆ ವಿಷಯದಲ್ಲಿ ಮತ್ತಷ್ಟು ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ. 
ಪುರುಷರು ಮಾತ್ರ ಏಕೆ ಪ್ರಧಾನಿ ಅಭ್ಯರ್ಥಿಯಾಗಬೇಕು? ನಮ್ಮ ದೇಶವನ್ನು ಇಂದಿರಾಗಾಂಧಿ 17 ವರ್ಷ ಆಳಿದರು. ಮಮತಾ ಬ್ಯಾನರ್ಜಿ/ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾಕಾಗಬಾರದು ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com