ನಾನೇನಾದರೂ ಪ್ರಧಾನಿಯನ್ನು ಅಪ್ಪಿಕೊಂಡಿದ್ದಿದ್ದರೆ ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು: ಓವೈಸಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಾನೇನಾದರೂ ಅಪ್ಪಿಕೊಂಡಿದಿದ್ದರೆ, ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ...
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಹೈದರಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಾನೇನಾದರೂ ಅಪ್ಪಿಕೊಂಡಿದಿದ್ದರೆ, ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ. 
ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಂತಿಮದಲ್ಲಿ ಮೋದಿಯವರಿಗೆ ಹಸ್ತಲಾಘವ ಮಾಡಿ ಅಪ್ಪಿಕೊಂಡಿದ್ದರು. 
ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಓವೈಸಿ, ಅವಿಶ್ವಾಸ ನಿರ್ಣಯವನ್ನು ಮೋದಿ ವಿರುದ್ಧ ಮಮಂಡನೆ ಮಾಡಲಾಗಿತ್ತು. ಯಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರೋ ಅವರನ್ನೇ ಹೋಗಿ ರಾಹುಲ್ ಅಪ್ಪಿಕೊಂಡಿದ್ದರು. ಒಂದು ವೇಳೆ ನಾನೇನಾದರೂ ಮೋದಿಯವರೊಂದಿಗೆ ಹಸ್ತಲಾಘವ ಮಾಡಲು ಹೋಗಿದಿದ್ದರೆ, ನನ್ನ ವಿರುದ್ಧ ಫತ್ವಾ ಹೊರಡಿಸಿ ಬಿಡುತ್ತಿದ್ದರು. ಆದರೆ, ರಾಹುಲ್ ಮೋದಿಯವರನ್ನು ಅಪ್ಪಿಕೊಂಡರೂ ಕಾಂಗ್ರೆಸ್ ನಾಯಕರೂ ಒಂದೂ ಮಾತನ್ನು ಆಡಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com