ಪೋಷಕರೆ ಎಚ್ಚರ, ಬ್ಲೂವೇಲ್ ಬಳಿಕ ಶುರುವಾಗಿದೆ ಅಪಾಯಕಾರಿ ಮೊಮೊ ಚಾಲೆಂಜ್!

ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಅದಾಗಲೇ ಜಗತ್ತಿನಾದ್ಯಂತ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಅದೇ ರೀತಿಯ ಅಪಾಯಕಾರಿ ಮೊಮೊ ಚಾಲೆಂಜ್ ಹುಟ್ಟಿಕೊಂಡಿದೆ...
ಮೊಮೊ ಆತ್ಮಹತ್ಯೆ ಚಾಲೆಂಜ್
ಮೊಮೊ ಆತ್ಮಹತ್ಯೆ ಚಾಲೆಂಜ್
ನವದೆಹಲಿ: ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಅದಾಗಲೇ ಜಗತ್ತಿನಾದ್ಯಂತ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಅದೇ ರೀತಿಯ ಅಪಾಯಕಾರಿ ಮೊಮೊ ಚಾಲೆಂಜ್ ಹುಟ್ಟಿಕೊಂಡಿದೆ. 
ಕೆಲ ದಿನಗಳಿಂದ ಮೊಮೊ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೊಮೊ ಚಾಲೆಂಜ್ ಆಟವನ್ನು ಫೇಸ್ ಬುಕ್ ಮತ್ತು ವಾಟ್ಸ್ಆ್ಯಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕ ಹಾನಿ ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತದೆ. 
ಇದೊಂದು ಡೆಡ್ಲಿ ಗೇಮ್ ಆಗಿದ್ದು, ಒಂದು ವೇಳೆ ಈ ಆಟವನ್ನು ಪೂರ್ಣಗೊಳಿಸದಿದ್ದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತದೆ. ಇದರಿಂದ ಈ ಆಟವನ್ನು ಆಡಲು ಜನರು ಭಯಪಡುತ್ತಿದ್ದಾರೆ. ಈ ಮೊಮೊ ಜಾಲೆಂಜ್ ಅನ್ನು ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. 
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ವಾಟ್ಸ್ಆ್ಯಪ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮಕ್ಕಳು ಮತ್ತು ಯುವಜನತೆಯನ್ನು ಮೊಮೊ ಚಾಲೆಂಜ್ ಗೆ ಸೆಳೆಯಲಾಗುತ್ತದೆ. ಅದರಲ್ಲೂ ಮಕ್ಕಳನ್ನು ಅತಿ ಹೆಚ್ಚಾಗಿ ಸೆಳೆಯುತ್ತದೆ. ಈ ಚಾಲೆಂಜ್ ತೆಗೆದುಕೊಳ್ಳುವವರ ಬಳಿ ಮೊದಲಿಗೆ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತದೆ. ಬ್ಲೂವೇಲ್ ಡೆಡ್ಲಿ ಗೇಮ್ ನಂತೆ ಇದೂ ಸಹ ಮಕ್ಕಳನ್ನು ಸಾವಿನ ದವಡೆಗೆ ತಳ್ಳುತ್ತದೆ. ಹೀಗಾಗಿ ಪೋಷಕರು ಎಚ್ಚರವಾಗಿರಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com