ಉಪ್ಪಿನ ಸತ್ಯಾಗ್ರಹ ಆರಂಭವಾದದ್ದು ಬಿಹಾರದಲ್ಲಿ: ಜಾರ್ಖಂಡ್ ಸಿಎಂ

ರಾಷ್ಟ್ರಪಿತ ಮಹಾತ್ಮ ಗಾಂಧಿ ಬಿಹಾರದ ಚಂಪಾರಣ್ಯದಿಂದ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ಬಿಹಾರ ಮುಖ್ಯಮಂತ್ರಿ ರಘುಬರ್ ದಾಸ್ ದಡ್ಡತನದ ಹೇಳಿಕೆ ...
ರಘುಬರ್ ದಾಸ್
ರಘುಬರ್ ದಾಸ್
ಪಾಟ್ನಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಬಿಹಾರದ ಚಂಪಾರಣ್ಯದಿಂದ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ಬಿಹಾರ ಮುಖ್ಯಮಂತ್ರಿ ರಘುಬರ್ ದಾಸ್ ದಡ್ಡತನದ ಹೇಳಿಕೆ ನೀಡಿದ್ದಾರೆ.  
ಪಾಟ್ನಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರಘುಬರ್ ದಾಸ್, ಬಿಹಾರ ಯಾವಾಗಲೂ ಎಲ್ಲರಿಗೂ ದಾರಿ ತೋರಿಸುವ ರಾಜ್ಯವಾಗಿದೆ, ಜಯ ಪ್ರಕಾಶ್ ನಾರಾಯಣ ಅಥವಾ ಮಹಾತ್ಮ ಗಾಂಧಿ ಇಲ್ಲಿನ ಚಂಪಾರಣ್ಯದಿಂದ ದಂಡಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು ಎಂದು ತಿಳಿಸಿದ್ದಾರೆ.
ಗಾಂಧೀಜಿ ಚಂಪಾರಣ್ಯದಿಂದ ಆರಂಭಿಸಿದ್ದು ಉಪ್ಪಿನ ಸತ್ಯಾಗ್ರಹವಲ್ಲ . 1917 ರಲ್ಲಿ ಚಂಪಾರಣ್ಯಗದಿಂದ ಆರಂಭಿಸಿದ್ದು, ಇಂಡಿಗೋ ಚಳುವಳಿಯನ್ನು ಆರಂಭಿಸಿದರು ಎಂಬುದು ಸಿಎಂ ಅರಿವಿಗೆ ಬಂದಿರಲಿಲ್ಲ,. 
1030 ರಲ್ಲಿ ಗಾಂಧೀಜಿ ದಂಡಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು. ಸಾಬರಮತಿಯಿಂದ ದಂಡಿವರೆಗೂ ನಡೆದುಕೊಂಡು ಹೋಗಿ ಉಪ್ಪಿನ ಮೇಲಿನ ತೆರಿಗೆ ಇಳಿಸುವಂತೆ ಒತ್ತಾಯಿಸಿದ್ದರು.  ಇದು ದಂಡಿ ಸತ್ಯಾಗ್ರಹವೆಂದೇ ಪ್ರಸಿದ್ಧವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com