ಬಿಹಾರ ಪ್ರಕರಣದ ಬೆನ್ನಲ್ಲೇ, ವಸತಿ ನಿಲಯಗಳ ಆಡಿಟ್ ಗೆ ಮುಂದಾದ ದೆಹಲಿ ಸರ್ಕಾರ
ದೇಶ
ಬಿಹಾರ ಪ್ರಕರಣದ ಬೆನ್ನಲ್ಲೇ, ವಸತಿ ನಿಲಯಗಳ ಆಡಿಟ್ ಗೆ ಮುಂದಾದ ದೆಹಲಿ ಸರ್ಕಾರ
ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ವಸತಿ ನಿಲಯಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಬಯಲಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ವಸತಿ ನಿಲಯಗಳ ಆಡಿಟ್ ಗೆ ಮುಂದಾಗಿದೆ.
ನವದೆಹಲಿ: ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ವಸತಿ ನಿಲಯಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಬಯಲಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ವಸತಿ ನಿಲಯಗಳ ಆಡಿಟ್ ಗೆ ಮುಂದಾಗಿದೆ.
ಈ ಬಗ್ಗೆ ದೆಹಲಿಯ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಹೇಳಿಕೆ ನೀಡಿದ್ದು, ಖಾಸಗಿ ಹಾಗೂ ಸರ್ಕಾರಿ ವಸತಿ ನಿಲಯಗಳ ಆಡಿಟ್ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಬಿಹಾರ ಹಾಗೂ ಉತ್ತರ ಪ್ರದೇಶ ಘಟನೆಗಳು ಆಘಾತ ಉಂಟುಮಾಡಿದೆ. ಈ ರೀತಿಯ ಘಟನೆಗಳು ದೆಹಲಿಯಲ್ಲಿ ನಡೆಯದಂತೆ ಎಚ್ಚರ ವಹಿಸಲು ಆಡಿಟ್ ನಡೆಸಲು ಆದೇಶಿಸಲಾಗಿದೆ ಎಂದು ದೆಹಲಿ ಸಚಿವರು ಹೇಳಿದ್ದಾರೆ.


