ಕರುಣಾನಿಧಿ ವಿಧಿವಶ: ಪ್ರಧಾನಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರ ಸಂತಾಪ

ತಮಿಳುನಾಡಿನ ಡಿಎಂಕೆ ವರಿಷ್ಠ, ದ್ರಾವಿಡ ನಾಯಕ ಎಂ. ಕರುಣಾನಿಧಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪದ ಮಹಾಪೂರವೇ ಹರಿದುಬರುತ್ತಿದೆ.
ಕರುಣಾನಿಧಿ
ಕರುಣಾನಿಧಿ
Updated on

ಚೆನ್ನೈ : ತಮಿಳುನಾಡಿನ ಡಿಎಂಕೆ ವರಿಷ್ಠ, ದ್ರಾವಿಡ ನಾಯಕ ಎಂ. ಕರುಣಾನಿಧಿ ಅವರ ನಿಧನಕ್ಕೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ   ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪದ ಮಹಾಪೂರವೇ ಹರಿದುಬರುತ್ತಿದೆ.

ಕರುಣಾನಿಧಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪವನ್ನು ಸೂಚಿಸಿದ್ದಾರೆ. ಕರುಣಾನಿಧಿ ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಜನ ಸಮೂಹ  ನಾಯಕ, ರಾಜಕೀಯ ಚಿಂತಕ, ಕಥೆಗಾರನನ್ನು ನಾವು ಕಳೆದುಕೊಂಡಿದ್ದೇವೆ.  ಬಡವರ ಕಲ್ಯಾಣಕ್ಕಾಗಿ ಅವರು  ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಮೋದಿ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

 ಕರುಣಾನಿಧಿ ಜೀವನ ಸ್ಪೂರ್ತಿಯುತವಾದದ್ದು, ಚಿತ್ರ ಕಥೆಗಾರನಾಗಿ  ತಮಿಳು ಚಿತ್ರ ರಂಗ ಪ್ರವೇಶಿಸಿದ್ದ ಕರುಣಾನಿಧಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದರು.  1975ರಲ್ಲಿ ತುರ್ತುಪರಿಸ್ಥಿತಿ ಘೋಷಯಾದಾಗ ಅವರ ಹೋರಾಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕರುಣಾನಿಧಿ  ದೇಶದ ರಾಜಕೀಯದ ದೈತ್ಯ ನಾಯಕರಾಗಿದ್ದರು . ತಮಿಳು ರಾಜಕೀಯ ತನ್ನ ಗತ ವೈಭವಕ್ಕೆ ಮತ್ತೆ ಮರಳದು ಎಂದು  ಹೇಳಿ ಕಾಂಗ್ರೆಸ್ ಮುಖಂಡ ಶಶಿ ತರೂರ್  ಸಂತಾಪ ಸೂಚಿಸಿದ್ದಾರೆ.
ಕರುಣಾನಿಧಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ತೀವ್ರ ಸಂತಾಪ ಸೂಚಿಸಿದ್ದಾರೆ .
 ನನ್ನ ಜೀವನದಲ್ಲಿ ಇದು ಕರಾಳ ದಿನ.  ಕರುಣಾನಿಧಿ ಅವರನ್ನು ಮರೆಯಲು ಸಾಧ್ಯವಿಲ್ಲ  . ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಸೂಪರ್ ಸ್ಟಾರ್  ರಜನಿಕಾಂತ್  ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com