ನವದೆಹಲಿ: ಬಿಜೆಪಿಯ ಪರಿತ್ಯಕ್ತ ಮಿತ್ರ ಪಕ್ಷ ಶಿವಸೇನೆ ನಾಳೆ ನಡೆಯಲಿರುವ ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ. .ಆಗಸ್ಟ್ 9ರಂದು ನಡೆಯುವ ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಜೆಡಿಯು ಪಕ್ಷದ ಹರಿವಂಶ ನಾರಾಯಣ ಸಿಂಗ್ ಅವರನ್ನು ಕಣಕ್ಕಿಳಿಸಿದೆ. .ಶಿವಸೇನೆಯ ಸಂಸದ ಅನಿಲ್ ದೇಸಾಯಿ ಅವರು ನಾವು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. .ಇನ್ನು ವಿಪಕ್ಷಗಳು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಮೇಲಿನ ಮತದಾನದಿಂದ ಶಿವಸೇನೆ ಹೊರಗುಳಿದಿತ್ತು..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics