ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ 2 ಭಾರತೀಯರ ರಕ್ಷಣೆ: ಸುಷ್ಮಾ ಸ್ವರಾಜ್

ವ್ಯವಹಾರ ನಿಮಿತ್ತ ಮಲೇಷಿಯಾ ಪ್ರವಾಸ ಕೈಗೊಂಡು ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ವ್ಯವಹಾರ ನಿಮಿತ್ತ ಮಲೇಷಿಯಾ ಪ್ರವಾಸ ಕೈಗೊಂಡು ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ವ್ಯವಹಾರ ಹಿನ್ನಲೆಯಲ್ಲಿ ಮಲೇಷಿಯಾಗೆ ತೆರಳಿದ್ದ ಆರ್.ಪಿ ವೈದ್ಯ ಹಾಗೂ ಕೆ.ಪಿ. ವೈದ್ಯ ಎಂಬುವವರು 2018ರ ಏಪ್ರಿಲ್ 3 ರಂದು ಅಪಹರಣಗೊಂಡಿದ್ದರು. ಇದೀಗ ಇಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. 
ಮಲೇಷಿಯಾದಲ್ಲಿ ಭಾರತೀಯ ಹೈ ಕಮಿಷನರ್ ಮೃದುಲ್ ಕುಮಾರ್ ಮತ್ತು ಅವರ ತಂಡ, ಮಲೇಷಿಯಾ ಪೊಲೀಸರು ನಡೆಸಿರುವ ಪ್ರಯತ್ನದ ಫಲವಾಗಿ ಇಬ್ಬರು ಭಾರತೀಯ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಲು ನಾನು ಸಂತೋಷ ಪಡುತ್ತೇನೆಂದು ಸುಷ್ಮಾ ಸ್ವರಾಜ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 
ಇದೇ ವೇಳೆ ಎಂ.ವಿ. ಮಹರ್ಷಿ ವಾಮದೇವ ಹಡಗಿನ ಸಿಬ್ಬಂದಿಗಳಾದ ರೋಹಿತ್ ಪಾಲ್ ಮತ್ತು ರಿಷಬ್ ಗುಪ್ತಾ ಅವರು ಹಡಗಿನಲ್ಲಿ ಎಸಿ ಮತ್ತು ಬೆಳಕು ಇಲ್ಲದಿದ್ದ ಕಾರಣಕ್ಕೆ ಹೀಟ್ ಸ್ಟ್ರೋಕ್'ಗೆ ಗುರಿಯಾಗಿದ್ದು. ಅವರನ್ಿನು ಮರಳಿ ದೇಶಕ್ಕೆ ಕರೆ ತರಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com