ಸಂಗ್ರಹ ಚಿತ್ರ
ದೇಶ
ಬಾರಾಮುಲ್ಲಾ ಎನ್ ಕೌಂಟರ್: ಮತ್ತೋರ್ವ ಉಗ್ರನ ಹತ್ಯೆ, ಸೇನೆ ಗುಂಡೇಟಿಗೆ ಒಟ್ಟು 5 ಉಗ್ರರ ಬಲಿ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬುಧವಾರ ಆರಂಭವಾಗಿರುವ ಎನ್ ಕೌಂಟರ್ ನಲ್ಲಿ ಗುರುವಾರ ಮತ್ತೊರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬುಧವಾರ ಆರಂಭವಾಗಿರುವ ಎನ್ ಕೌಂಟರ್ ನಲ್ಲಿ ಗುರುವಾರ ಮತ್ತೊರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್ ನಲ್ಲಿ ಬುಧವಾರ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ನಾಲ್ವರು ಉಗ್ರರನ್ನು ಹೊಡೆದುರುಳಿಸಿತ್ತು. ಇದೀಗ ಈ ಪಟ್ಟಿಗೆ ಮತ್ತೋರ್ವ ಉಗ್ರನ ಸೇರ್ಪಡೆಯಾಗಿದ್ದು, ಇಂದು ಮತ್ತೋರ್ವ ಉಗ್ರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ.
ಇನ್ನು ಇದೇ ಕಾರ್ಯಾಚರಣೆಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ನಾಲ್ಕು ಸೈನಿಕರು ಹುತಾತ್ಮರಾಗಿದ್ದರು. ಮೇಜರ್ ಕೆ.ಪಿ. ರಾಣೆ, ಹವಾಲ್ಡಾರ್ ಜೇಮೀ ಸಿಂಗ್ ಮತ್ತು ವಿಕ್ರಮ್ ಜೀತ್ ಮತ್ತು ರೈಫಲ್ ಮ್ಯಾನ್ ಮಂದೀಪ್ ಅವರು ಹುತಾತ್ಮರಾಗಿದ್ದರು.
ಕಳೆದ ಒಂದು ವಾರದ ಹಿಂದಷ್ಟೇ ಇದೇ ಗುರೇಜ್ ಸೆಕ್ಟರ್ ಎನ್ ಕೌಂಟರ್ ಗೆ ಸಾಕ್ಷಿಯಾಗಿತ್ತು. ಇದಾದ ಕೆಲವೇ ವಾರಗಳ ಅಂತರದಲ್ಲಿ ಮತ್ತೊಂದು ಎನ್ ಕೌಂಟರ್ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ