ರಫೆಲ್ ವಿವಾದದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರತಿಪಕ್ಷ ಯತ್ನ; ನಿರ್ಮಲಾ ಸೀತಾರಾಮನ್ ಆರೋಪ

ರಫೆಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ತೀಕ್ಷ್ಮವಾಗಿ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಹಿತಕ್ಕಾಗಿ ಮಾಡಿಕೊಂಡ ಸರಿಯಾದ ಅಂತರ ಸರ್ಕಾರ ಒಪ್ಪಂದ ಇದಾಗಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಆದ ಒಪ್ಪಂದದ ವಾಸ್ತವಾಂಶಗಳನ್ನು ತಿರುಚಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದರು.

ವಿರೋಧ ಪಕ್ಷಗಳು ಮಾಡಿರುವ ಹಲವು ಆಪಾದನೆಗಳಿಗೆ ಈಗಾಗಲೇ ಸಂಸತ್ತಿನಲ್ಲಿ ಉತ್ತರಿಸಲಾಗಿದೆ. ಇತ್ತೀಚೆಗೆ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಮಾಡಿದ್ದ ಆಧಾರರಹಿತ ಆಪಾದನೆಗಳು ಬಿದ್ದುಹೋಗಿದೆ. ಆಪಾದನೆಯ ಮೌಲ್ಯ ಕಳೆದುಕೊಂಡಿದೆ. ಇಂದು ಮತ್ತೆ ವಾಸ್ತವಾಂಶಗಳು ತಿರುಚಿ ಆಪಾದನೆ ಮಾಡಲಾಗುತ್ತಿದೆ ಎಂದರು.

2016 ಅಂತರ ಸರ್ಕಾರ ಒಪ್ಪಂದದಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಲಾಗಿದ್ದು, ದೇಶದ ಜನರ ಹಿತಕ್ಕಾಗಿ ಮಾಡಿಕೊಂಡ ಒಪ್ಪಂದವಾಗಿದೆ. ಪದೇಪದೇ ಈ ರೀತಿ ಆರೋಪ ಮಾಡುತ್ತಿರುವುದು ಅಸಹ್ಯವನ್ನುಂಟುಮಾಡುತ್ತಿದ್ದು ಸರ್ಕಾರದ ವರ್ಚಸ್ಸನ್ನು ಕುಂದಿಸಲು ಮಾಡುವ ಯತ್ನ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು.

ಎನ್ ಡಿಎ ಸರ್ಕಾರ ಫ್ರಾನ್ಸ್ ಮೂಲದ ಡಸ್ಸೌಲ್ಟ್ ಏವಿಯೇಷನ್ ನೊಂದಿಗೆ 2016ರಲ್ಲಿ 36 ರಫೆಲ್ ಜೆಟ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಹಲವು ಅಕ್ರಮಗಳು ನಡೆದಿದೆ ಎಂಬುದು ವಿರೋಧ ಪಕ್ಷ ಕಾಂಗ್ರೆಸ್ ನ ಆರೋಪವಾಗಿದೆ. ವಿಮಾನದ ಬೆಲೆಯೆಷ್ಟು ಎಂದು ಬಹಿರಂಗಪಡಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಸರ್ಕಾರವನ್ನು ಒತ್ತಾಯಿಸಿತ್ತು.
ಒಪ್ಪಂದ ಕುರಿತು ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com