ಸಿನಿಮಾ ಪ್ರೇಕ್ಷಕರು ಹೊರಗಿನ ಆಹಾರ ಕೊಂಡೊಯ್ಯಲು ಅನುವು: ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಸಿನಿಮಾ ಪ್ರೇಕ್ಷಕರು ಥಿಯೇಟರ್ ಒಳಗೆ ಹೊರಗಿನ ಆಹಾರವನ್ನು ಕೊಂಡೊಯ್ಯಲು ಅನುಮತಿ ನೀಡಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಸಿನಿಮಾ ಪ್ರೇಕ್ಷಕರು  ಥಿಯೇಟರ್ ಒಳಗೆ  ಹೊರಗಿನ ಆಹಾರವನ್ನು ಕೊಂಡೊಯ್ಯಲು ಅನುಮತಿ ನೀಡಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್   ತಡೆ ನೀಡಿದೆ.

ಜುಲೈ ತಿಂಗಳಲ್ಲಿ  ಜಮ್ಮು- ಕಾಶ್ಮೀರ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಭಾರತೀಯ ಮಲ್ಟಿಪ್ಲೆಕ್ ಅಸೋಸಿಯೇಷನ್  ಪರ ವಕೀಲರು ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಈ ತೀರ್ಪು ನೀಡಿದೆ.

ಥಿಯೇಟರ್ ಒಳಗೆ ಆಹಾರ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟರೆ  ಭದ್ರತೆಯ ಸಮಸ್ಯೆ ಎದುರಾಗುತ್ತದೆ ಎಂದು  ವಕೀಲರು ವಾದ ಮಂಡಿಸಿದರು.

ಸಿನಿಮಾ ಪ್ರೇಕ್ಷಕರು ಥಿಯೇಟರ್ ಒಳಗೆ ಆಹಾರ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ನೀಡುವಂತೆ  ಜಮ್ಮು-ಕಾಶ್ಮೀರ ಹೈಕೋರ್ಟ್  ಜುಲೈ ತಿಂಗಳಲ್ಲಿ   ರಾಜ್ಯದ ಎಲ್ಲಾ ಥಿಯೇಟರ್ ಮಾಲೀಕರಿಗೆ ಸೂಚನೆ ನೀಡಿತ್ತು.

ಇದೇ ರೀತಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕೂಡಾ  ಆಗಸ್ಟ್  1 ರಿಂದ ಸಿನಿಮಾ ಪ್ರೇಕ್ಷಕರು ಹೊರಗಿನ ಆಹಾರ ಪದಾರ್ಥಗಳನ್ನು ಥಿಯೇಟರ್ ಒಳಗೆ ಕೊಂಡೊಯ್ಯಬಹುದು ಎಂದು ಘೋಷಣೆ ನೀಡಿತ್ತು.

ಆದಾಗ್ಯೂ, ಮಲ್ಟಿಪ್ಲೆಕ್ಸ್ ಸಿನಿಮಾ ಮಾಲೀಕರ ಪ್ರತಿಭಟನೆಯಿಂದಾಗಿ ಆಗಸ್ಟ್ 8 ರಂದು ಬಾಂಬೆ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಭದ್ರತೆ ಹಿನ್ನೆಲೆಯಲ್ಲಿ   ತಮ್ಮ ನಿರ್ಧಾರವನ್ನು  ಸರ್ಕಾರ  ಹಿಂತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com