ಅಕ್ರಮ ನುಸುಳುಕೋರರಿಂದ ದೇಶದಲ್ಲಿ ಕಾಶ್ಮೀರದಂತಹ ಮತ್ತಷ್ಟು ಸಮಸ್ಯೆಗಳು ಉದ್ಭವ: ಬಾಬಾ ರಾಮ್ ದೇವ್

ದೇಶದಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ನಿಯಂತ್ರಿಸದಿದ್ದರೆ ಮತ್ತೆ ಹತ್ತು ಕಾಶ್ನೀರದಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ನಿಯಂತ್ರಿಸದಿದ್ದರೆ ಮತ್ತೆ ಹತ್ತು ಕಾಶ್ನೀರದಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಅಸ್ಸಾಂ ಎನ್ ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ ದೇವ್ ಅವರು, ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿಚಾರ ಒಳ್ಳೆಯದೇ. ಖಂಡಿತವಾಗಿಯೂ ದೇಶದ ಅಕ್ರಮ ನುಸುಳುಕೋರರನ್ನು ನಿಗ್ರಹಿಸಬೇಕು. ಇಲ್ಲವಾದಲ್ಲಿ ಮತ್ತೆ ಹತ್ತು ಕಾಶ್ಮೀರದಂತಹ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.
ಒಂದು ಮೂಲದ ಪ್ರಕಾರ ಸುಮಾರು 3 ರಿಂದ 4 ಕೋಟಿ ಅಕ್ರಮ ನುಸುಳುಕೋರರು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ನಾವು ಇದನ್ನು ಕೂಡಲೇ ನಿಯಂತ್ರಸಿಬೇಕು. ಇಲ್ಲವಾದಲ್ಲಿ ಮತ್ತೆ 10 ಕಾಶ್ಮೀರ ದಂತಹ ಸಮಸ್ಯೆಗಳು ತಲೆ ಎತ್ತುತ್ತವೆ. ಅಕ್ರಮ ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡಬೇಕು.  ಅಕ್ರಮ ನುಸುಳುಕೋರರಿಂದ ದೇಶಕ್ಕೆ ಗಂಭೀರ ಆತಂಕವಿದೆ ಎಂಬುದನ್ನು ಯಾರೂ ಮರೆಯಬಾರದು. ಅವರು ಪಾಕಿಸ್ತಾನಿಯರಾಗಿರಬಹುದು ಅಧವಾ ಬಾಂಗ್ಲಾದೇಶೀಯರು ಅಥವಾ ರೊಹಿಂಗ್ಯನ್ನರಾಗಿಬಹುದು. ಅಷ್ಟೇ ಅಕ್ರಮ ನುಸುಳುಕೋರರು ಅಮೆರಿಕನ್ನರೇ ಆಗಿದ್ದರೆ ಅವರನ್ನು ಗುರುತಿಸಿ ದೇಶದಿಂದ ಹೊರಗಟ್ಟಬೇಕು. 
ಈಗಾಗಲೇ ಒಂದು ಕಾಶ್ಮೀರದಿಂದ ನಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಅಕ್ರಮ ನುಸುಳುಕೋರರನ್ನು ಹೀಗೆ ಬಿಟ್ಟರೆ ದೇಶದಲ್ಲಿ ಕಾಶ್ಮೀರದಂತಹ ಮತ್ತೆ 10 ಸಮಸ್ಯೆಗಳು ಎದುರಾಗುತ್ತವೆ ಎಂದು ಬಾಬಾ ರಾಮ್ ದೇವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com