ಮಾನನಷ್ಟ ಹೇಳಿಕೆ : ಅಮಿತ್ ಶಾ ವಿರುದ್ಧ ಟಿಎಂಸಿ ಕಾನೂನು ಕ್ರಮ

ಆಗಸ್ಟ್ 11 ರಂದು ಕೊಲ್ಕತ್ತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನೀಡಿದ ಮಾನನಷ್ಟ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಟಿಎಂಪಿ ಸಂಸದ ಅಭಿಷೇಕ್ ಬ್ಯಾನರ್ಜಿ ಕಾನೂನು ನೋಟಿಸ್ ರವಾನಿಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಆಗಸ್ಟ್ 11 ರಂದು ಕೊಲ್ಕತ್ತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನೀಡಿದ ಮಾನನಷ್ಟ ಹೇಳಿಕೆ ಆರೋಪದ  ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಟಿಎಂಪಿ ಸಂಸದ ಅಭಿಷೇಕ್ ಬ್ಯಾನರ್ಜಿ ಕಾನೂನು ನೋಟಿಸ್  ಕಳುಹಿಸಿದ್ದಾರೆ.

ಯುವ ಸ್ವಾಭಿಮಾನ್ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರಸರ್ಕಾರ  ಪಶ್ಚಿಮ ಬಂಗಾಳಕ್ಕೆ ಬಿಡುಗಡೆ ಮಾಡಿದ 3.59 ಲಕ್ಷ ಕೋಟಿ ರೂಪಾಯಿ ಮಮತಾ ಬ್ಯಾನರ್ಜಿ  ಸಂಬಂಧಿ  ಅಭಿಷೇಕ್  ಅವರಿಗೆ ಸೇರಿದೆ ಎಂದು ಆರೋಪಿಸಿದ್ದರು.

ಪ್ರಧಾನಿ ನರೇಂದ್ರಮೋದಿ ಕಳುಹಿಸಿದ 3 ಲಕ್ಷ 59 ಸಾವಿರ ಕೋಟಿ ಏಲ್ಲಿಗೆ ಹೋಯಿತು. ಅದು ಮಮತಾ ಬ್ಯಾನರ್ಜಿ ಸಂಬಂಧಿ ಮತ್ತು ಸಿಂಡಿಕೇಟ್  ಅವರಿಗೆ ಕೊಡುಗೆಯಾಗಿ ಹೋಯಿತಾ ಎಂದು ಅಮಿತ್ ಶಾ ಪ್ರಶ್ನಿಸಿದ್ದರು.

ಅಮಿತ್ ಶಾ ತಮ್ಮ ವಿರುದ್ಧ ದುರುದ್ದೇಶ ಪೂರಿತ , ಮಾನಹಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟಿಎಂಪಿ ಸಂಸದ ನೋಟಿಸ್ ನಲ್ಲಿ ತಿಳಿಸಿದ್ದಾರೆ.

 72 ಗಂಟೆಗಳೊಳಗೆ ಅಮಿತ್ ಶಾ ಬೇಷರತ್ತಾದ ಕ್ಷಮೆಯಾಚಿಸಬೇಕು, ತಪ್ಪಿದ್ದಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು, ನಾಗರಿಕ ಮತ್ತು ಕ್ರೀಮಿನಲ್  ಕೇಸ್ ದಾಖಲಿಸುವುದಾಗಿ ಮಮತಾ ಬ್ಯಾನರ್ಜಿ   ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com