ಅಶ್ಲೀಲ ವಿಡಿಯೋ ತೋರಿಸಿ 6 ತಿಂಗಳು ಅತ್ಯಾಚಾರ!; ವಸತಿ ನಿಲಯದ ಮತ್ತೊಂದು ಕಾಮಕಾಂಡ

ಮುಜಾಫರ್ ಪುರ ವಸತಿ ನಿಲಯದ ಲೈಂಗಿಕ ದೌರ್ಜನ್ಯ ಮತ್ತು ನಿಗೂಢ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಂತಹ ಹಲವು ಪ್ರಕರಣಗಳು ನಿಧಾನವಾಗಿ ಸುದ್ದಿಯಾಗುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭೋಪಾಲ್: ಮುಜಾಫರ್ ಪುರ ವಸತಿ ನಿಲಯದ ಲೈಂಗಿಕ ದೌರ್ಜನ್ಯ ಮತ್ತು ನಿಗೂಢ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಂತಹ ಹಲವು ಪ್ರಕರಣಗಳು ನಿಧಾನವಾಗಿ ಸುದ್ದಿಯಾಗುತ್ತಿವೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಭೋಪಾಲ್ ನಲ್ಲೂ ಇಂತಹುದೇ ಮಾದರಿಯ ಕುಕೃತ್ಯ ನಡೆದಿದ್ದು, ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿನ ಬಡ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅತ್ಯಾಚಾರ ಮಾಡುತ್ತಿದ್ದ ಅಮಾನವೀಯ ಘಟನೆ ವರದಿಯಾಗಿದೆ.
ಭೋಪಾಲ್ ನ ಖಾಸಗಿ ಹೆಣ್ಣಮಕ್ಕಳ ವಸತಿ ನಿಲಯದ ನಿರ್ದೇಶಕರೊಬ್ಬರು ನಿತ್ಯ ತಮ್ಮ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅವರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬಳಿಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರಂತೆ. ಹೀಗೆ ಕಳೆದ ಆರು ತಿಂಗಳಿನಿಂದ ಆತನಿಂದ ಅತ್ಯಾಚಾರಕ್ಕೆ ಬಲಿಯಾಗಿದ್ದ ವಿದ್ಯಾರ್ಥಿನಿಯೊಬ್ಬಳು ಇದೀಗ ಮಾಧ್ಯಮಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಾನು ಅನುಭವಿಸುತ್ತಿದ್ದ ನರಕಯಾತನೆಯನ್ನು ಬಹಿರಂಗ ಪಡಿಸಿದ್ದಾಳೆ.
ನಿತ್ಯ ಹಾಸ್ಟೆಲ್ ನಲ್ಲಿ ನರಕ ಯಾತನೆ ಅನುಭವಿಸುತ್ತಿದ್ದೆ. ನನ್ನನ್ನು ತನ್ನ ಕೊಠಡಿಗೆ ಕರೆಯುತ್ತಿದ್ದ ಆತ ಬಲವಂತವಾಗಿ ನನ್ನನ್ನು ತನ್ನ ಕೊಠಡಿಯಲ್ಲೇ ಬಂಧಿ ಮಾಡುತ್ತಿದ್ದ, ಬಳಿಕ ನನಗೆ ಅಶ್ಲೀಲ ವಿಡಿಯೋ ತೋರಿಸಿ ಬಲವಂತವಾಗಿ ನನ್ನ ಮೈ ಮೇಲೆ ಎರಗುತ್ತಿದ್ದ. ಕಳೆದ ಆರು ತಿಂಗಳಿನಿಂದ ನಾನು ಈ ಯಾತನೆಯನ್ನು ಅನುಭವಿಸುತ್ತಿದ್ದೇನೆ. ಒಂದು ವೇಳೆ ನಾನು ಆತ ಹೇಳಿದಂತೆ ನಡೆದುಕೊಳ್ಳದಿದ್ದರೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದ. ಮನಬಂದಂತೆ ಥಳಿಸುತ್ತಿದ್ದ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಪ್ರಸ್ತುತ ವಿದ್ಯಾರ್ಥಿನಿ ನೀಡಿರುವ ಹೇಳಿಕೆ ಮೇರೆಗೆ ದೂರು ದಾಖಲಿಸಿಕೊಂಡಿರುವ ಬೋಪಾಲ್ ಪೊಲೀಸರು ವಸತಿ ನಿಲಯದ ನಿರ್ದೇಶಕ ಮತ್ತು ಆರೋಪಿ ಅಶ್ವಿನಿ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ,. ಬೋಪಾಲ್ ಹೊರವಲಯದ ಅವಧ್ ಪುರಿಯಲ್ಲಿ ಈ ಹೆಣ್ಣುಮಕ್ಕಳ ಖಾಸಗಿ ಹಾಸ್ಟೆಲ್ ನಡೆಸುತ್ತಿದ್ದು, ಇಲ್ಲೇ ಈತನ ಕಾಮಕಾಂಡ ಬಯಲಾಗಿದೆ. ದೂರು ನೀಡಿರುವ ವಿದ್ಯಾರ್ಥಿನಿಯನ್ನು ಪೊಲೀಸ್ ಅಧಿಕಾರಿಗಳು ಸುರಕ್ಷಿಕತವಾಗಿ ತಮ್ಮಲ್ಲೇ ಉಳಿಸಿಕೊಂಡಿದ್ದು, ಈಕೆ ದೂರು ನೀಡಿರುವ ವಿಚಾರ ಬಹಿರಂಗವಾದ ಬೆನ್ನಲ್ಲೇ ಅದೇ ಹಾಸ್ಟೆಲ್ ನ ಇತರೆ ವಿದ್ಚಾರ್ಥಿನಿಯರೂ ತಮ್ಮ ಮೇಲೂ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೂ ಹಾಸ್ಟೆಲ್ ಮಾಲೀಕನ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com