ಕೊಟ್ಟಾಯಂ ಬಳಿಯ ಮಲಂಕ್ಕಾರಾ ಆರ್ಥಡಾಕ್ಸ್ ಚರ್ಚನ ಪಾದ್ರಿಗಳು ವಿವಾಹಿತ ಮಹಿಳೆಯ ಜೀವನದ ಕೆಲ ರಹಸ್ಯಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ, ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ನಾಲ್ವರು ಪಾದ್ರಿಗಳ ವಿಚಾರವಾಗಿ ಈ ಚರ್ಚ್ ಸಾಕಷ್ಟು ವಿವಾದಕ್ಕೆ ಈಡಾಗಿದೆ. ತನ್ನ ಬಳಿ ಸಾಕಷ್ಟು ಸಾಕ್ಷಿ ಇದೇ ಎಂದು ಹೇಳಿರುವ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.