ಪ್ರಧಾನಿ ಮೋದಿ ಮುಖಾ-ಮುಖಿ ಸಂದರ್ಶನಗಳ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಲಿ: ಶಿವಸೇನೆ

ಪ್ರಧಾನಿ ಮೋದಿ ಮುಖಾ-ಮುಖಿ ಸಂದರ್ಶನಗಳ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ತಿಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಪ್ರಧಾನಿ ನರೇಂದ್ರಮೋದಿ ಅವರ ಮಾಧ್ಯಮಗಳಲ್ಲಿನ  ಸಂದರ್ಶನ ಪ್ರಚಾರದ ಯತ್ನವಾಗಿದೆ ಎಂದು ಶಿವಸೇನೆ ಆರೋಪಿಸಿದ್ದು,  ಇದು ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಮಾತ್ರ ನಡೆಯುತ್ತದೆ ಇಲ್ಲಿ ನಡೆಯುವುದಿಲ್ಲ ಹೇಳಿಕೆ ನೀಡಿದೆ.

ಪ್ರಧಾನಿ ಮೋದಿ ಮುಖಾ-ಮುಖಿ ಸಂದರ್ಶನಗಳ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಿ ಎಂದು  ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ತಿಳಿಸಲಾಗಿದೆ.

2014ರ ಲೋಕಸಭಾ ಚುನಾವಣೆಯಿಂದಲೂ  ಪತ್ರಕರ್ತರ ಗೆಳೆಯರಾಗಿರುವ ನರೇಂದ್ರಮೋದಿ ಪ್ರಧಾನಿಯಾದ ಬಳಿಕ ಯಾವುದೇ ಸುದ್ದಿಗೋಷ್ಠಿ ನಡೆಸಿಲ್ಲ. ಆದರೆ ಪ್ರಧಾನಿಯಾದ ಮೇಲೆ ಮೋದಿ ತನ್ನ ಸುತ್ತಲೂ ಪಂಜರವನ್ನು ಸೃಷ್ಟಿಸಿದ್ದಾರೆ ಎಂದು ಶಿವಸೇನೆ ಹೇಳಿದೆ.

ಇ- ಮೇಲ್ ಮುಖಾಂತರ ನರೇಂದ್ರಮೋದಿ ಸಂದರ್ಶನ ನೀಡುವುದು ಮುಂದುವರೆದರೆ  ಪತ್ರಕರ್ತರು ಶೀಘ್ರದಲ್ಲಿ ಕೆಲಸ ಕಳೆದುಕೊಂಡು ಮನೆ ಕಡೆಗೆ ತೆರಳುವಂತಾಗುತ್ತದೆ. ನಂತರ ಅವರಿಗೆ ಪ್ರಧಾನಿಯೇ ಕೆಲಸ ಕೊಡಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

 ಮುಖಾಮುಖಿ ಸಂದರ್ಶನಕ್ಕೆ ಇಲ್ಲದಿರುವುದರಿಂದ ನರೇಂದ್ರಮೋದಿ ಏಕಾಏಕಿಯಾಗಿ ಇ-ಮೇಲ್ ಮೂಲಕ ಕಾಣಿಸಿಕೊಂಡು ಸಂದರ್ಶನ ನೀಡುತ್ತಿದ್ದಾರೆ. ಇದರ ಬಗ್ಗೆ ಪತ್ರಕರ್ತರು ಪ್ರಧಾನಿ ಕಾರ್ಯಾಲಯದಿಂದ ಲಿಖಿತ ಉತ್ತರ ಪಡೆಯುವಂತೆ  ಶಿವಸೇನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com