ಉತ್ತರ ಪ್ರದೇಶ: ಶೀಲ ಶಂಕಿಸಿ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ!

ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕೆಗೊಂಡ ಪತಿರಾಯ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಶಹಜಹಾನ್ಪುರ್(ಉತ್ತರ ಪ್ರದೇಶ): ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕೆಗೊಂಡ ಪತಿರಾಯ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆ ಪಾಲ್ಹೋರಾ ಗ್ರಾಮದ ಅರ್ಜುನ್ ತನ್ನ ಪತ್ನಿಯ ಶೀಲ ಶಂಕಿಸಿ ಮೂಗನ್ನು ಕಚ್ಚಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ.
ಭಾನುವಾರ ತಾನು ಹೊರಗಡೆ ಹೋಗಬೇಕೆಂದ ಪತ್ನಿಯ ವಿಚಾರವಾಗಿ ಕೋಪಗೊಂಡ ಪತಿ ಅರ್ಜುನ್ ಅವಳ ಮೂಗು ಕಚ್ಚಿ ಗಾಯಗೊಳಿಸಿದ್ದಾನೆ ಎಂದು  ನಗರ ಪೊಲೀಸ್ ಅಧೀಕ್ಷಕ ದಿನೇಶ್ ತ್ರಿಪಾಠಿ ವಿವಿಅರಿಸಿದರು.
ಘಟನೆ ಬಳಿಕ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಐದು ದಿನಗಳ ಹಿಂದೆ ಬರೇಲಿಗೆ ಭೇಟಿನೀಡಿದ್ದ ಅರ್ಜುನ್ ತನ್ನ ಹೆಂಡತಿ ಬಗ್ಗೆ ಕೋಪಗೊಂಡಿದ್ದ.ಅಲ್ಲದೆ ಆಕೆ ವ್ಯಭಿಚಾರಿ ಎಂದೂ ದೂರಿದ್ದಾನೆ.ಇದೇ ಕಾರನಕ್ಕೆ ಇಬರ ನಡುವೆ ನಡೆದ ಜಗಳದಲ್ಲಿ ಪತ್ನಿಯ ಮೂಗನ್ನು ಕತ್ತರಿಸಲಾಗಿದೆ ಎಂದು ತ್ರಿಪಾಠಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com