2019 ಚುನಾವಣೆ ಬಳಿಕ ದೇಶದಾದ್ಯಂತ ಎನ್ಆರ್'ಸಿ ಜಾರಿಗೆ ತರಲಾಗುವುದು: ಬಿಜೆಪಿ ಸಂಸದ
2019ರ ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಇಡೀ ದೇಶದಾದ್ಯಂತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್'ಸಿ)ಯನ್ನು ಜಾರಿಗೆ ತರಲಾಗುತ್ತದೆ ಎಂದು ಬಿಜೆಪಿ ಸಂಸದ ಒಪಿ ಮಥುರ್ ಅವರು ಸೋಮವಾರ ಹೇಳಿದ್ದಾರೆ...
ಜುಂಜುನು: 2019ರ ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಇಡೀ ದೇಶದಾದ್ಯಂತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್'ಸಿ)ಯನ್ನು ಜಾರಿಗೆ ತರಲಾಗುತ್ತದೆ ಎಂದು ಬಿಜೆಪಿ ಸಂಸದ ಒಪಿ ಮಥುರ್ ಅವರು ಸೋಮವಾರ ಹೇಳಿದ್ದಾರೆ,
ಅಸ್ಸಾಂ ಎನ್ಆರ್'ಸಿ ಕರಡು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಸ್ಸಾಂ ನಲ್ಲಿ ಎನ್ಆರ್'ಸಿ ಕರಡು ಜಾರಿಗೆ ತರಲಾಗಿದೆ. ಇದೇ ರೀತಿ 2019ರ ಲೋಕಸಭಾ ಚುನಾವಣೆ ಬಳಿಕ ಇಡೀ ದೇಶದಾದ್ಯಂತ ಕೂಡ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
2019 ಚುನಾವಣೆ ಬಳಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಇಡೀ ದೇಶದಾದ್ಯಂತ ಎನ್ಆರ್'ಸಿ ಜಾರಿಗೆ ತರುತ್ತೇವೆ. ಎನ್ಆರ್'ಸಿ ಪಟ್ಟಿಯಿಂದಾಗಿ ಯಾವುದೇ ಭಾರತೀಯ ಪ್ರಜೆಗಳು ದೇಶವನ್ನು ಬಿಡುವುದಿಲ್ಲ. ದೇಶವನ್ನು ಧರ್ಮಶಾಲೆಯಾಗಲು ನಾವು ಬಿಡುವುದಿಲ್ಲ. ಅಕ್ರಮವಾಗಿ ಗಡಿ ದಾಟುವಿಕೆಯನ್ನು ಕಾನೂನಾತ್ಮಕವಾಗಿ ತಡೆಯುತ್ತೇವೆಂದು ತಿಳಿಸಿದ್ದಾರೆ.