ತಮ್ಮ ವಿರುದ್ಧ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 300 ಸೇನಾ ಸಿಬ್ಬಂದಿ!

ಭಾರತದಲ್ಲಿ ಹಿಂದೆಂದೂ ನಡೆದಿರದ ಘಟನೆಯೊಂದು ನಡೆದಿದ್ದು ಸುಮಾರು 300 ಸೇನಾ ಸಿಬ್ಬಂದಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 300 ಸೇನಾ ಸಿಬ್ಬಂದಿಗಳು!
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 300 ಸೇನಾ ಸಿಬ್ಬಂದಿಗಳು!
ನವದೆಹಲಿ: ಭಾರತದಲ್ಲಿ ಹಿಂದೆಂದೂ ನಡೆದಿರದ ಘಟನೆಯೊಂದು ನಡೆದಿದ್ದು ಸುಮಾರು 300 ಸೇನಾ ಸಿಬ್ಬಂದಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಸೇನಾ ಸಿಬ್ಬಂದಿಗಳು ಮನವಿ ಸಲ್ಲಿಸಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ ರದ್ದು ಕೋರಿ 300 ಸೇನಾ ಸಿಬ್ಬಂದಿಗಳು ಹೇಳಿದ್ದಾರೆ. 
ಭಯೋತ್ಪಾದಕರು, ಬಂಡಾಯ ಇರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಯೋಧರಿಗೆ ಎಫ್ಐಆರ್, ಸ್ಥಳೀಯ ಪೊಲೀಸರು ಅಥವಾ ಸಿಬಿಐ ತನಿಖೆ ನಡೆಸುವುದರಿಂದ ಹಿನ್ನಡೆಯುಂಟಾಗಿ ಕಾರ್ಯಾಚರಣೆ ದುರ್ಬಲವಾಗುತ್ತದೆ, ಈ ಹಿನ್ನೆಲೆಯಲ್ಲಿ ಎಫ್ಐಆರ್ ಗಳನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 
ಅರ್ಧಕ್ಕೂ ಹೆಚ್ಚು ಜನರ ವಿರುದ್ಧ ಸಲ್ಲಿಸಲಾಗಿರುವ ಎಫ್ಐಆರ್ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆಗೆ ವಿರುದ್ಧವಾಗಿದೆ,  ಈ ಕಾಯ್ದೆಯಡಿ ಯೋಧರು ಅವರ ಕರ್ತವ್ಯ ನಿರ್ವಹಿಸಿದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ, ಇದರಿಂದ ಯೋಧರ ಆತ್ಮವಿಶ್ವಾಸ ಕುಗ್ಗುತ್ತಿದೆ ಎಂದು ಸೇನಾ ಸಿಬ್ಬಂದಿ ಪರ ವಕೀಲರಾದ ಐಶ್ವರ್ಯ ಭಾಟಿ ವಾದ ಮಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com