ಜಯಲಲಿತಾ ಸಾವು ತನಿಖೆ; ಏಮ್ಸ್ ವೈದ್ಯರನ್ನು ವಿಚಾರಣೆಗೆ ಕರೆದ ನ್ಯಾ.ಅರುಮುಗಸ್ವಾಮಿ ಸಮಿತಿ

ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನಿಧನದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ...
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನಿಧನದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ ಅರ್ಮುಗಸ್ವಾಮಿ ಆಯೋಗ ಏಮ್ಸ್ ಆಸ್ಪತ್ರೆಯ ಮೂವರು ವೈದ್ಯರಿಗೆ ಸಮ್ಮನ್ಸ್ ನೀಡಿದೆ. ಅಪೊಲ್ಲೊ ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಇವರಾಗಿದ್ದು ಆಗಸ್ಟ್ 23 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

2016ರ ಸೆಪ್ಟೆಂಬರ್ 22ರಿಂದ ಡಿಸೆಂಬರ್ 5ರವರೆಗೆ ಅಪೊಲ್ಲೊ ಆಸ್ಪತ್ರೆಯಲ್ಲಿ ಈ ವೈದ್ಯರು ನಿಯಮಿತವಾಗಿ ಜಯಲಲಿತಾ ಅವರ ಆರೋಗ್ಯ ವಿಚಾರಿಸುತ್ತಿದ್ದರು.

ಇದುವರೆಗೆ ಆಯೋಗದ 75 ಸಾಕ್ಷಿದಾರರು ಮತ್ತು ಇತರ ಏಳು ಮಂದಿ ಸ್ವಯಂಪ್ರೇರಿತವಾಗಿ ತನಿಖಾ ಆಯೋಗಕ್ಕೆ ಹೇಳಿಕೆ ನೀಡಿದ್ದಾರೆ. ಇವರಲ್ಲಿ 30 ಮಂದಿಯನ್ನು ಸಮಾಲೋಚಕರು ವಿ ಕೆ ಶಶಿಕಲಾ ಅವರ ಬಗ್ಗೆ ವಿಚಾರಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಮಿಳುನಾಡು ಸರ್ಕಾರ ತನಿಖಾ ಕಾಯ್ದೆ 1952ರ ಆಯೋಗದಡಿಯಲ್ಲಿ ತಂಡವೊಂದನ್ನು ರಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com