ಇಮ್ರಾನ್ ಖಾನ್ ಪ್ರಮಾಣವಚನದಲ್ಲಿ ಸಿಕ್ಸರ್ ಸಿಧು: ಪಾಕ್ ಸೇನಾ ಮುಖ್ಯಸ್ಥರ ಆಲಿಂಗನ; ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಆಸೀನ

ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಆಹ್ವಾನವನ್ನು ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ತಿರಸ್ಕರಿಸಿದ್ದರು.
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Updated on
ಇಸ್ಲಾಮಾಬಾದ್: ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಆಹ್ವಾನವನ್ನು ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ತಿರಸ್ಕರಿಸಿದ್ದರು. ಆದರೆ ಆಹ್ವಾನವನ್ನು ಒಪ್ಪಿಕೊಂಡು ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 
ಪಾಕ್ ಪ್ರಧಾನಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಧು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮರ್‌ ಜಾವೇದ್‌ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದು, ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ  ಕುಳಿತು ಸುದ್ದಿಯಾಗಿದ್ದಾರೆ. 
ಪಂಜಾಬ್ ಸಚಿವ ಸಿಧು ಅವರನ್ನು ಇಸ್ಲಾಮಾಬಾದ್ ನಲ್ಲಿರುವ ಅಧ್ಯಕ್ಷರ ನಿವಾಸದಲ್ಲಿ ಜನರಲ್ ಬಾಜ್ವಾ ಹಾಗೂ ಅಲ್ಲಿನ ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದು, ಹಲವು ನಿಮಿಷಗಳು ಬಾಜ್ವಾ ಹಾಗೂ ಸಿಧು ಪರಸ್ಪರ ಆತ್ಮೀಯವಾಗಿ ಮಾತನಾಡಿರುವುದು ಕಂಡುಬಂದಿದೆ.  ಸ್ವಾಗತಿಸುವ ವೇಳೆ ಕಮರ್ ಜಾವೇದ್ ಬಾಜ್ವಾ ಅವರು ಸಿಧು ಅವರನ್ನು ಆಲಿಂಗಿಸಿಕೊಂಡಿದ್ದು, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ , ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಕುಳಿತಿದ್ದಾರೆ. 
ಗಡಿ ಪ್ರದೇಶದಲ್ಲಿ ಒಳನುಸುಳುವವರಿಗೆ ಸಹಕಾರ ನೀಡುವ ಆರೋಪ ಬಾಜ್ವಾ ಅವರ ವಿರುದ್ಧ ಕೇಳಿಬಂದಿದ್ದು ಪಾಕ್ ಸೇನೆ ಭಾರತ ದ್ವೇಷಿ ಮನಸ್ಥಿತಿಯನ್ನು ಪೋಷಿಸುತ್ತದೆ ಎಂಬ ಗಂಭೀರ ಆರೋಪವಿದೆ. ಈ ಹಂತದಲ್ಲಿ ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಆಲಿಂಗಿಸಿ, , ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಕುಳಿತಿರುವ ಫೋಟೊ ಪ್ರಕಟವಾಗಿದ್ದು ಸಿಧು ವಿರುದ್ಧ ಟೀಕೆಗಳು ಕೇಳಿಬರಬಹುದೆಂದೂ ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com