ಕೇರಳಕ್ಕೆ ಮತ್ತಷ್ಟು ಪರಿಹಾರ ಹಣ ನೀಡಿ- ರಾಹುಲ್: ರಾಜಕೀಯ ಮಾಡಬೇಡಿ ಪ್ಲೀಸ್- ಕಿರೆಣ್ ರಿಜಿಜು

ಭಾರೀ ಮಳೆ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಮತ್ತಷ್ಟು ಪರಿಹಾರ ಹಣ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ....
ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು
ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು
ನವದೆಹಲಿ: ಭಾರೀ ಮಳೆ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಮತ್ತಷ್ಟು ಪರಿಹಾರ ಹಣ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ,  ಕೇಂದ್ರ ಸರ್ಕಾರ ಕೇರಳಕ್ಕೆ 500 ಕೋಟಿ ರು ಮಧ್ಯಂತರ ಪರಿಹಾರ ನೀಡಿರುವುದಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ,
ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಕೇರಳ ಜನರನ್ನು ನರಳಲು ಬಿಡಬಾರದು, ಕೇರಳಕ್ಕೆ ಮತ್ತಷ್ಟು ಪರಿಹಾರ ಹಣ ನೀಡಿ, . ಈಗ ನೀಡಿರುವ ಅನುದಾನ ಯಾವುದಕ್ಕೂ ಕಾಗುವುದಿಲ್ಲ, ನೀವು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದೀರಾ. ಕೇರಳ ಜನ ನರಳು ಬಿಡಬೇಡಿ ಎಂದು ಹೇಳಿದ್ದಾರೆ.
ವಿಪತ್ತಿನ ಸಮಯದಲ್ಲಿ ರಾಜಕೀಯ ಮಾಡಬಾರದು, ಮಳೆ ಮತ್ತು ಪ್ರವಾಹಕ್ಕಾಗಿ ರಕ್ಷಮಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ವಿಪತ್ತಿನ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಕೆಲಸ ಮಾಡಬೇಕು. ದಯವಿಟ್ಟು ರಾಜಕೀಯ ಮಾಡಬೇಡಿ, ನೂರಾರು ರಕ್ಷಣಾ ಪಡೆಗಳು 90 ಕ್ಕೂ ಏರ್ ಕ್ರಾಫ್ಟ್, 500 ಮೋಟಾರ್ ಬೋಟ್ಸ್,ಎನ್ ಡಿ ಆರ್ ಎಫ್, ನೌಕಾದಳ, ಹಾಗೂ ಅರೆ ಸೇನಾ ಪಡೆಗಳು ಪರಿಹಾರ ಕಾರ್ಯಕ್ಕಾಗಿ ತೆರಳಿವೆ ಎಂದು ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com