ಬಿಹಾರದ ಬಹುತೇಕ ಎಲ್ಲಾ ಶೆಲ್ಟರ್ ಹೋಮ್ ಗಳಲ್ಲಿ ಲೈಂಗಿಕ ದೌರ್ಜನ್ಯ: ಟಿಐಎಸ್ಎಸ್

ಬಿಹಾರದ ಬಹುತೇಕ ಎಲ್ಲಾ ಪಾಲನಾಗೃಹ(ಶೆಲ್ಟರ್ ಹೋಮ್)ಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದ ಬಹುತೇಕ ಎಲ್ಲಾ ಪಾಲನಾಗೃಹ(ಶೆಲ್ಟರ್ ಹೋಮ್)ಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್(ಟಿಐಎಸ್ಎಸ್) ವರದಿ ಬಹಿರಂಗಪಡಿಸಿದೆ.
ಬಿಹಾರದ ಪಾಲನಾಗೃಹಗಳ ಸಾಮಾಜಿಕ ಸಮೀಕ್ಷೆ ನಡೆಸುತ್ತಿರುವ ಟಿಐಎಸ್ಎಸ್, ಕೆಲವು ಶೆಲ್ಟರ್ ಗಳು "ವಿಸ್ಮಯಕಾರಿ ರೀತಿಯಲ್ಲಿರುವುದು" ಪತ್ತೆಯಾಗಿದೆ ಎಂದು ಹೇಳಿದೆ.
ಬಿಹಾರ ಸರ್ಕಾರ 2017ರಲ್ಲಿ ಟಿಐಎಸ್ಎಸ್ ನಿಂದ ಸಾಮಾಜಿಕ ಸಮೀಕ್ಷೆಗೆ ಆದೇಶಿಸಿದ್ದು, ಕಳೆದ ಏಪ್ರಿಲ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಲಾಗಿದೆ.
ಸುಮಾರು 100 ಪುಟಗಳ ವರದಿಯಲ್ಲಿ, ಮುಜಾಫರ್ ಪುರದ ಪಾಲನಾಗೃಹದಲ್ಲಿ ತೀವ್ರ ಹಿಂಸಾತ್ಮಕ ಘಟನೆಗಳು ಹಾಗೂ ಲೈಂಗಿಕ ಕಿರುಕುಳ ವ್ಯಾಪಕವಾಗಿ ನಡೆದಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಸಮೀಕ್ಷೆಗೆ ಒಳಪಡಿಸಿದ 110 ಪಾಲನಾಗೃಹಗಳ ಪೈಕಿ ಬಹುತೇಕ ಎಲ್ಲಾ ಪಾಲನಾಗೃಹಗಳಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನಡೆಯುತ್ತಿದೆ. ಹಲವು ಕೇಂದ್ರಗಳ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲದಂಥ ದಯನೀಯ ಸ್ಥಿತಿ ಇದೆ. ಅಲ್ಲದೆ ಪಾಲನಾಗೃಹಗಳಲ್ಲಿ ಇರುವ ಮಹಿಳೆಯರ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಅಲ್ಲಿನ ಸಿಬ್ಬಂದಿ ಬಹಿರಂಗಪಡಿಸುತ್ತಿರುವ ಅಂಶ ಸಹ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com