ಪ್ರವಾಹ ಪೀಡಿತ ಕೇರಳದಲ್ಲಿ ಈಗ ಪುನರ್ವಸತಿಯದ್ದೇ ಬೃಹತ್ ಸವಾಲು!

ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿ ಜರ್ಝರಿತಗೊಂಡಿರುವ ಕೇರಳದಲ್ಲಿ ಮಳೆ ಈಗ ಸ್ವಲ್ಪ ಬಿಡುವು ನೀಡಿದೆ. ಆದರೆ, ಈಗ ಮನೆಯಿಲ್ಲದ ಜನರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ನೀರಿನಿಂದ ಹರಡುವ...
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ
Updated on

ಕೇರಳ: ಭೀಕರ ಪ್ರವಾಹದಿಂದ ನಲುಗಿದ ಕೇರಳದಲ್ಲಿ ಮಳೆಯಿಂದ ಈಗ ಸ್ವಲ್ಪ ಬಿಡುವು ಪಡೆದುಕೊಂಡಿದೆ. ಆದರೆ, ಇದು ಮನೆಯಿಲ್ಲದ ಜನರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವುದು ದೈತ್ಯಾಕಾರದ ಸವಾಲಾಗಿದೆ.

ಮೃತರ ಸಂಖ್ಯೆ 216

ಸುಮಾರು 5. 645  ಪರಿಹಾರ ಶಿಬಿರಗಳಲ್ಲಿ 7. 24 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಎರ್ನಾಕುಲಂ ಜಿಲ್ಲೆಯ ಪಾರೂರ್ ಬಳಿ ಕಳೆದ ರಾತ್ರಿ ಆರು ಮೃತದೇಹಗಳು ದೊರೆತಿದ್ದು, ಆಗಸ್ಟ್ 8 ರಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 216 ಕ್ಕೆ ಏರಿಕೆ ಆಗಿದೆ ಎಂದು ಸ್ಥಳೀಯ ಶಾಸಕ ವಿ. ಡಿ. ಸತೀಶನ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ನೀರು ಮತ್ತು ವಿದ್ಯುತ್  
ಸಂಪರ್ಕ
ಪ್ರವಾಹದಿಂದಾಗಿ ಕಳೆದ 26 ರಿಂದ ರನ್ ವೇ ಸ್ಥಗಿತಗೊಂಡಿದ್ದ  ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮತ್ತೆ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ಸಣ್ಣ ಹೆಲಿಕಾಪ್ಟರ್ ಗಳ ಸೇರಿದಂತೆ  ಕೊಚ್ಚಿಯ ನೌಕ ವಿಮಾನನಿಲ್ದಾಣದಿಂದ  ವಾಣಿಜ್ಯಾತ್ಮಕ ವಿಮಾನಗಳು ಸೇವೆ ಆರಂಭಿಸಿದ್ದು, ಇಂದು ಬೆಳಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಬಂದಿಳಿಯಿತು.
ಪರಿಹಾರ ಸಾಮಾಗ್ರಿಗಳು
ನೌಕಪಡೆಯ ಐಎನ್ಎಸ್ ದೀಪಕ್ ವಿಮಾನದಿಂದ ಮುಂಬೈಯಿಂದ  ಸುಮಾರು 800 ಟನ್ ಗಳಷ್ಟು ಶುದ್ದ ನೀರನ್ನು  ತರಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎರಡು ದೋಣಿಗಳಲ್ಲಿ ತಾಜಾ ನೀರನ್ನು ನೀಡಲಾಗುತ್ತಿದೆ ಎಂದು ಕೊಚ್ಚಿನ್ ಬಂದರು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ: ಕೇರಳದ ಇಂಧನ ಬೇಡಿಕೆಯನ್ನು ಪೂರೈಸಲು ಮುಂಬೈಯಿಂದ 50000 ಟನ್ ಕಚ್ಚಾ ತೈಲವನ್ನು ಬಿಪಿಸಿಎಲ್ ಮೂಲಕ ಕೊಚ್ಚಿನ್ ಬಂದರಿಗೆ ಕಳುಹಿಸಲಾಗಿದೆ.ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ  ಕೇರಳದ ಹಿನ್ನೀರಿನ ಮತ್ತು  ರಸ್ತೆಗಳ ನಡುವಿನ ವ್ಯತ್ಯಾಸವೇ ಬದಲಾಗಿದ್ದು.   ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಇಲ್ಲದಂತಾಗಿದೆ.
ಕೇರಳದಲ್ಲಿ ಮತ್ತೆ ರೈಲು ಸಂಚಾರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com