ವಿಚಾರಣೆ ನಡೆದ 7 ಗಂಟೆಯಲ್ಲೇ 14 ವರ್ಷದ ಬಾಲಪರಾಧಿಗೆ ಶಿಕ್ಷೆ ಘೋಷಣೆ, ದೇಶದ ಇತಿಹಾಸದಲ್ಲೇ ಪ್ರಥಮ!

ಯಾವುದೇ ಒಂದು ಪ್ರಕರಣ ಇತ್ಯಾರ್ಥವಾಗಲು ವರ್ಷಗಳೆ ಬೇಕಾಗುತ್ತದೆ ಅಂತಹದರಲ್ಲಿ ಮಧ್ಯಪ್ರದೇಶದಲ್ಲಿ ವಿಚಾರಣೆ ಶುರುವಾಗಿ ಬರೀ 7 ಗಂಟೆ ಅವಧಿಯೊಳಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಉಜೈನ್: ಯಾವುದೇ ಒಂದು ಪ್ರಕರಣ ಇತ್ಯಾರ್ಥವಾಗಲು ವರ್ಷಗಳೆ ಬೇಕಾಗುತ್ತದೆ ಅಂತಹದರಲ್ಲಿ ಮಧ್ಯಪ್ರದೇಶದಲ್ಲಿ ವಿಚಾರಣೆ ಶುರುವಾಗಿ ಬರೀ 7 ಗಂಟೆ ಅವಧಿಯೊಳಗೆ 14ರ ಬಾಲಕ ಅತ್ಯಾಚಾರಿ ಅಂತ ಸಾಬೀತಾಗಿದ್ದು ಆತನನ್ನು 2 ವರ್ಷಗಳ ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. 
ಪ್ರಕರಣದ ನಡೆದ 5 ದಿನದಲ್ಲೇ ತೀರ್ಪು ಬಂದಿರುವುದು ನ್ಯಾಯಾಲಯದ ಇತಿಹಾಸದಲ್ಲೇ ಪ್ರಥಮ ಎಂದು ಹೇಳಲಾಗುತ್ತಿದೆ. 
ನಿನ್ನೆ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಾಲಾಪರಾಧಿ ನ್ಯಾಯ ಮಂಡಳಿಯ ನ್ಯಾಯಧೀಶರಾದ ತ್ರಿಪಾಠಿ ಪಾಂಡೆ ಅವರು ಅತ್ಯಾಚಾರಿಗೆ 2 ವರ್ಷಗಳ ಕಾಲ ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಸರ್ಕಾರಿ ವಕೀಲ ದೀಪೇಂದ್ರ ಮಾಲು ತಿಳಿಸಿದ್ದಾರೆ. 
ಆಗಸ್ಟ್ 15ರಂದು ಈ ಘಟನೆ ನಡೆದಿದ್ದು ಪ್ರಕರಣ ನಡೆದ 5 ದಿನದಲ್ಲೇ ಅಪರಾಧಿಗೆ ಶಿಕ್ಷೆ ನೀಡಲಾಗಿದೆ. ನಿನ್ನೆ ಬೆಳಗ್ಗೆ 10.45ಕ್ಕೆ ಶುರುವಾದ ವಿಚಾರಣೆ ಸಂಜೆ 6 ಗಂಟೆಯೊಳಗೆ ತೀರ್ಪು ನೀಡಲಾಗಿದೆ. 
ನಾಲ್ಕು ವರ್ಷದ ಮಗುವನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ 14 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com