ನನ್ನ ಆತ್ಮಸಾಕ್ಷಿ ಪ್ರಕಾರ ನಡೆದುಕೊಳ್ಳುತ್ತೇನೆ, ಏನು ಮಾಡಬೇಕೆಂದು ಯಾರು ಹೇಳಬೇಕಿಲ್ಲ: ಸಿದು ಕಿಡಿ

ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಹಾಜರಾಗಿದ್ದಕ್ಕೆ ಸ್ವಷ್ಟೀಕರಣ ನೀಡಿದ್ದಾರೆ. ...
ನವಜೋತ್ ಸಿಂಗ್ ಸಿದು
ನವಜೋತ್ ಸಿಂಗ್ ಸಿದು
ನವದೆಹಲಿ: ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಹಾಜರಾಗಿದ್ದಕ್ಕೆ ಸ್ವಷ್ಟೀಕರಣ ನೀಡಿದ್ದಾರೆ. 
ಪಾಕಿಸ್ತಾನದವರ ಪ್ರೀತಿ ಆದರಕ್ಕೆ ನನ್ನ ಹೃದಯ ತುಂಬಿ ಬಂದಿದೆ, ಪಾಕಿಸ್ತಾನ ಸೇನಾ ಮುಖ್ಯಸ್ಥರು ನನ್ನ ತಬ್ಬಿಕೊಂಡಿದ್ದಕ್ಕೆ ಸುಖಾಸುಮ್ಮನೆ ವಿವಾಗದ ಎಬ್ಬಿಸಲಾಗುತ್ತಿದೆ,. ನಾನು ಏನು ಮಾಡಬೇಕು ಎಂದು ಯಾರು ನನಗೆ ಹೇಳುವ ಅಗತ್ಯವಿಲ್ಲ, ನನ್ನ ಆತ್ಮ ಸಾಕ್ಷಿಯ ಪ್ರಕಾರ ನಾನು ನಡೆದುಕೊಳ್ಳುತ್ತೇನೆ ಎಂದು ಕಿಡಿಕಾರಿದ್ದಾರೆ.
ಪಾಕ್ ಸೇನೆ ಅಧ್ಯಕ್ಷರನ್ನು ತಬ್ಬಿಕೊಂಡಿದ್ದಕ್ಕೆ ಎಬ್ಬಿಸಿರುವ ವಿವಾದದಿಂದ ನನಗೆ ನೋವಾಗಿದೆ, ಅದೊಂದು ಕ್ಷಣ ಅಷ್ಟೆ, ಅವರ ಮುಂದೆ ನಾನು ಕುಳಿತಿದ್ದೆ, ಅವರು ಬಂದಾಗ ನಾನು ಎದ್ದು ತಬ್ಬಿಕೊಂಡೆ, ಅದಾದ ನಂತರ ನಾನು ಅವರ ಜೊತೆ ಮಾತನಾಡಲಿಲ್ಲ. 
ಪಾಕಿಸ್ತಾನ ಯಾರೋ ಒಬ್ಬ ವ್ಯಕ್ತಿಯ ದೇಶವಲ್ಲ, ಅನೇಕ ಜನ ಭಾರತದಿಂದ ಹೋಗುತ್ತಾರೆ, ಬರುತ್ತಾರೆ, ಪಾಕಿಸ್ತಾನದ ಪತ್ರಕರ್ತರು, ರಾಜಕಾರಣಿಗಳು ಮತ್ತು ಇತರೆ ಜನ ನನಗೆ ಅಪಾರ ಪ್ರೀತಿ ತೋರಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಲಾಹೋರ್ ಗೆ ಭೇಟಿ ನೀಡಿದ್ದರು. ಶಾಂತಿ ಸ್ಥಾಪನೆ ಮಾಡಲು ಈ ಹಿಂದೆಯೂ ಪ್ರಯತ್ನಗಳು ನಡೆದಿವೆ, ಪ್ರಧಾನಿ ಮೋದಿ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ನವಾಜ್ ಷರೀಫ್  ಅವರನ್ನು ಆಹ್ವಾನಿಸಿದ್ದರು, ಜೊತೆಗೆ ಮೋದಿ ಕೂಡ ಲಾಹೋರ್ ಗೆ ಬೇಟಿ ನೀಡಿದ್ದರು. 
ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ, ಇಮ್ರಾನ್ ಖಾನ್ ನನ್ನ ,ಸ್ನೇಹಿತರು, ತಮ್ಮ ಭಾಷಣದಲ್ಲಿ ನೆರೆಯ ದೇಶದೊಂದಿಗೆ ಶಾಂತಿ ಕಾಪಾಡಲುಪ ಎಲ್ಲಾ ರೀತಿಯ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ,
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ, ಪಂಜಾಬ್ ಸಿಎಂ ವಿರುದ್ಧ ಮಾತನಾಡುವ ಅವಶ್ಯಕತೆ ನನಗಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com