ಕಾಶ್ಮೀರದಲ್ಲಿ ಹಿಂಸಾಚಾರ: ಸೈನಿಕರ ಮೇಲೆ ಕಲ್ಲು ತೂರಾಟ; ಪಾಕ್, ಇಸಿಸ್ ಧ್ವಜ ಪ್ರದರ್ಶಿಸಿ ಅಟ್ಟಹಾಸ

ಪೂರ್ವಜರ ಬಲಿದಾನ ಸ್ಮರಿಸುವ ದಿನವಾದ ಬಕ್ರೀದ್ ಹಬ್ಬದ ದಿನ ಕೂಡ ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಯಾಗಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬೀದಿಗಿಳಿದ ಪ್ರತಿಭಟನಾಕಾರರು ಭದ್ರತಾಪಡೆಗಳ...
ಬಕ್ರೀದ್ ಹಬ್ಬದಂದೂ ಕಾಶ್ಮೀರದಲ್ಲಿ ಹಿಂಸಾಚಾರ: ಸೈನಿಕರ ಮೇಲೆ ಕಲ್ಲು ತೂರಾಟ, ಪಾಕ್, ಇಸಿಸ್ ಧ್ವಜ ಪ್ರದರ್ಶಿಸಿ ಅಟ್ಟಹಾಸ
ಬಕ್ರೀದ್ ಹಬ್ಬದಂದೂ ಕಾಶ್ಮೀರದಲ್ಲಿ ಹಿಂಸಾಚಾರ: ಸೈನಿಕರ ಮೇಲೆ ಕಲ್ಲು ತೂರಾಟ, ಪಾಕ್, ಇಸಿಸ್ ಧ್ವಜ ಪ್ರದರ್ಶಿಸಿ ಅಟ್ಟಹಾಸ
ಶ್ರೀನಗರ: ಪೂರ್ವಜರ ಬಲಿದಾನ ಸ್ಮರಿಸುವ ದಿನವಾದ ಬಕ್ರೀದ್ ಹಬ್ಬದ ದಿನ ಕೂಡ ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಯಾಗಿದ್ದು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬೀದಿಗಿಳಿದ ಪ್ರತಿಭಟನಾಕಾರರು ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಪಾಕಿಸ್ತಾನ ಮತ್ತು ಇಸಿಸ್ ಉಗ್ರ ಸಂಘಟನೆ ಧ್ವಜ ಪ್ರದರ್ಶಿಸಿ ಅಟ್ಟಹಾಸ ಮೆರೆದಿದ್ದಾರೆ. 
ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಜಂಗ್ಲತ್ ಮಂಡಿ ಎಂಬಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿದ ಬಳಿಕ ರಸ್ತೆಗಳಿಗೆ ಬಂದ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಯ ಧ್ವಜನ್ನು ಹಾರಿಸಿ ದೇಶದ್ರೋಹಿ ಕೃತ್ಯವೆಸಗಿದ್ದಾರೆ. 
ಇದಲ್ಲದೆ, ಭದ್ರತೆ ನೀಡುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ಸೃಷ್ಟಿ ಮಾಡಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಮಸೀದಿಯಲ್ಲಿ ಪಾರ್ಥನೆ ಸಲ್ಲಿಸಿ ಮನೆಗೆ ತೆರಳುತ್ತಿದ್ದ ಝಾಝಿಪೊರಾದ ಫಯಾದ್ ಅಹ್ಮದ್ ಶಾ ಎನ್ನುವ ಪೊಲೀಸ್ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪೇದೆ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com