ಕೇರಳದಲ್ಲಿ ನೌಕಪಡೆ ರಕ್ಷಣಾ ಕಾರ್ಯಾಚರಣೆ ಅಂತ್ಯ

ಪ್ರವಾಹ ಪೀಡಿತ ಕೇರಳದಲ್ಲಿ 14 ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿದ ದಕ್ಷಿಣ ನೌಕಪಡೆ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.
ಕೇರಳ ಪ್ರವಾಹ
ಕೇರಳ ಪ್ರವಾಹ
ಕೊಚ್ಚಿ: ಪ್ರವಾಹ ಪೀಡಿತ ಕೇರಳದಲ್ಲಿ 14 ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿದ ದಕ್ಷಿಣ ನೌಕಪಡೆ ರಕ್ಷಣಾ  ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.
ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ  ಸ್ಥಳಾಂತರಿಸುವಿಕೆಗೆ ಹೆಚ್ಚಿನ ಮನವಿ ಬರುತ್ತಿಲ್ಲ ಎಂದು ನೌಕಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಕೇರಳ ಸರ್ಕಾರದ  ಸಹಯೋಗದಲ್ಲಿ ಆಗಸ್ಟ್ 9 ರಿಂದಲೂ ಆಪರೇಷನ್ ಮ್ಯಾಡದ್ ಕಾರ್ಯಾಚರಣೆ ಕೈಗೊಂಡು  ಒಟ್ಟಾರೇ,  ಸುಮಾರು 16, 005 ಜನರನ್ನು  ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇರಳ ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್ 8 ರಿಂದಲೂ ಉಂಟಾದ ಭೀಕರ ಪ್ರವಾಹದಿಂದಾಗಿ 231 ಜನರು ಮೃತಪಟ್ಟಿದ್ದು, 32 ಜನರು ನಾಪತ್ತೆಯಾಗಿದ್ದಾರೆ.  3.91 ಲಕ್ಷ ಕುಟುಂಬಕ್ಕೆ ಸೇರಿದ ಸುಮಾರು 14.50 ಲಕ್ಷ ಜನರು ಇಂದಿಗೂ  ರಾಜ್ಯದಾದ್ಯಂತ ತೆರಿದಿರುವ 3 879 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com