ರಾಜಸ್ತಾನ: ಅಂಡರ್‏ಪಾಸ್ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಶಾಲಾ ಬಸ್; ವಿದ್ಯಾರ್ಥಿಗಳು ಬಚಾವ್, ವಿಡಿಯೋ ವೈರಲ್!

ದೇಶದ ವಿವಿಧ ಕಡೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ಅನಾಹುತಗಳು ಸಂಭವಿಸುತ್ತಲೇ ಇವೆ. ರಾಜಸ್ತಾನದಲ್ಲೂ ಕೂಡಾ ವಿಪರೀತ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಸಂಭವನೀಯ ಅಪಾಯದಿಂದ ಬಚಾವ್ ಆಗಿದ್ದಾರೆ.
ಶಾಲಾ ಬಸ್ಸಿನ ಚಿತ್ರ
ಶಾಲಾ ಬಸ್ಸಿನ ಚಿತ್ರ

ರಾಜಸ್ತಾನ : ದೇಶದ ವಿವಿಧ ಕಡೆಗಳಲ್ಲಿ  ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ಅನಾಹುತಗಳು ಸಂಭವಿಸುತ್ತಲೇ ಇವೆ. ರಾಜಸ್ತಾನದಲ್ಲೂ ಕೂಡಾ ವಿಪರೀತ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳು  ಸಂಭವನೀಯ ಅಪಾಯದಿಂದ ಬಚಾವ್ ಆಗಿದ್ದಾರೆ.

ದೌಸಾ ಬಳಿಯ ಜಗೊನಾರ್ ಗ್ರಾಮದಲ್ಲಿ  ಮಳೆಯಿಂದಾಗಿ  ಶಾಲಾ ಬಸ್ ವೊಂದು  ಅಂಡರ್ ಪಾಸ್ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ನಂತರ ಅಲ್ಲಿಗೆ ಧಾವಿಸಿದ ಪೊಲೀಸರು  ಮಕ್ಕಳನ್ನು ರಕ್ಷಿಸಿದ್ದಾರೆ ಈ ವಿಡಿಯೋ ಇದೀಗ ವೈರಲ್ ಆಗಿದೆ.

50 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ,ದೌಸಾ- ಗಂಗಾಪುರ್ ಸಿಟಿ ರೈಲ್ವೆ ಮಾರ್ಗದಲ್ಲಿನ ಅಂಡರ್ ಪಾಸ್  ಒಳಗೆ ನುಗ್ಗಿದ್ದು,  ಹಿಂದೆ ಮುಂದೆ ಚಲಿಸಲು ಆಗದೆ ಮಧ್ಯದಲ್ಲಿಯೇ ನಿಂತುಬಿಟ್ಟಿದೆ. ಇದರಿಂದ  ದಿಕ್ಕುತೋಚದಂತಾದ ವಿದ್ಯಾರ್ಥಿಗಳು ಆತಂಕದಲ್ಲಿಯೇ   ಒಬ್ಬೊಬ್ಬರೇ  ಬಸ್ಸಿನ ಸೀಟು, ಕಿಟಕಿಗಳ ಸಹಾಯದಿಂದ   ಹೊರಗೆ ಬಂದಿದ್ದಾರೆ.

ಆದರೆ, ಹೀಗೆ ಸಾಹಸಪಟ್ಟು ಹೊರಬಂದರೂ ಈಜು ಬಾರದೆ ಬಸ್ ಮೇಲೆಯೇ ಇದ್ದು, ಚೀರಾಟ ಆರಂಭಿಸಿದ್ದಾರೆ. ನಂತರ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು  ಒಬ್ಬೊಬ್ಬರೇ ಮಕ್ಕಳನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ದಡ ಸೇರಿಸಿದ್ದಾರೆ.

ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದ್ದು,  ಮದದ್ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com