ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ

ವಿದೇಶದಲ್ಲಿ ಭಾರತದ ಟೀಕೆ ಪ್ರಾರಂಭಿಸಿದ್ದು ಪ್ರಧಾನಿ, ಅದನ್ನು ಅನುಸರಿಸಬೇಡಿ: ಯಶವಂತ್ ಸಿನ್ಹಾ

ನಮ್ಮ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು, ಪ್ರಧಾನಿಯವರು ಈ ...

ನವದೆಹಲಿ: ನಮ್ಮ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು, ಪ್ರಧಾನಿಯವರು ಈ ನಿಯಮವನ್ನು ಮೊದಲ ಬಾರಿಗೆ ಮುರಿದರು. ಬೇರೆಯವರು ಅವರನ್ನು ಅನುಸರಿಸಬೇಕಾಗಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಜರ್ಮನಿಯ ಹ್ಯಾಮ್ ಬರ್ಗ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣಕ್ಕೆ ಉಲ್ಲೇಖವಾಗಿ ಯಶವಂತ್ ಸಿನ್ಹಾ ಅವರ ಈ ಟ್ವೀಟ್ ಇದೆ. ಅಲ್ಲ ಅವರು ಸಾಮೂಹಿಕ ಹತ್ಯೆ ಮತ್ತು ಅನಾಣ್ಯೀಕರಣದ ಕುರಿತು ಮಾತನಾಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ಜರ್ಮನಿಯ ಹ್ಯಾಮ್ ಬರ್ಗ್ ನ ಶಾಲೆಯೊಂದರಲ್ಲಿ ಸಂವಾದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿಯವರ ನೋಟುಗಳ ಅನಾಣ್ಯೀಕರಣ ಮತ್ತು ಅದರಿಂದ ಉಂಟಾದ ಹಾನಿಯ ಬಗ್ಗೆ ಟೀಕಿಸಿದ್ದರು. ಈ ಬಗ್ಗೆ ಯಶವಂತ್ ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಮನ್ ನ ರಾಜಧಾನಿ ಮಸ್ಕತ್ ನ ಸುಲ್ತಾನ್ ಖಬೂಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಾ, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಲವು ಹಗರಣಗಳನ್ನು ಮಾಡಿ ದೇಶಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಟೀಕಿಸಿದ್ದರು. ಯಾರೂ ಕೂಡ ನನ್ನ ಸರ್ಕಾರ ಭ್ರಷ್ಟವಾಗಿದೆ ಎಂದು ಟೀಕಿಸಬಾರದು ಎಂದಿದ್ದರು.

ನಂತರ ಅದೇ ವರ್ಷ ಕೆನಡಾದಲ್ಲಿ ಇನ್ನು ಮುಂದೆ ಭಾರತ ಸ್ಕಿಲ್ ಇಂಡಿಯಾ ಎಂದು ಕರೆಯಲ್ಪಡುತ್ತದೆಯೇ ಹೊರತು ಸ್ಕ್ಯಾಮ್ ಇಂಡಿಯಾ ಎಂದಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com