ಕೇರಳ ಪ್ರವಾಹ ಪರಿಹಾರ: ವಿದೇಶಿ ನೆರವಿನ ಬಗ್ಗೆ ನೀತಿ ತಜ್ಞರಲ್ಲಿ ಜಿಜ್ಞಾಸೆ

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ಧನಸಹಾಯ ಸ್ವೀಕರಿಸದಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ವಾದ ವಿವಾದಗಳು...
ಕೇರಳ ಪ್ರವಾಹದಲ್ಲಿ ಕೊಚ್ಚಿ ಹೋದ ತನ್ನ ಮನೆಯ ಅಮೂಲ್ಯ ವಸ್ತುಗಳನ್ನು ನೆನೆದು ಕಣ್ಣೀರಿಡುತ್ತಿರುವ ಮಹಿಳೆ
ಕೇರಳ ಪ್ರವಾಹದಲ್ಲಿ ಕೊಚ್ಚಿ ಹೋದ ತನ್ನ ಮನೆಯ ಅಮೂಲ್ಯ ವಸ್ತುಗಳನ್ನು ನೆನೆದು ಕಣ್ಣೀರಿಡುತ್ತಿರುವ ಮಹಿಳೆ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ಧನಸಹಾಯ ಸ್ವೀಕರಿಸದಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ವಾದ ವಿವಾದಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು ನಿನ್ನೆ ಅದು ಮತ್ತೊಂದು ಹಂತ ತಲುಪಿದೆ. ಸರ್ಕಾರದ ನಿಲುವನ್ನು ಇಬ್ಬರು ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ, ಕೇರಳ ಪ್ರವಾಹ ಪರಿಸ್ಥಿತಿಯನ್ನು ದೇಶೀಯ ಮಟ್ಟದಲ್ಲಿಯೇ ಎದುರಿಸಲು ಮತ್ತು ನಿಭಾಯಿಸಲು ಶಕ್ತವಾಗಿದೆ ಎಂದು ತನ್ನ ಮಾತಿಗೆ ಬದ್ಧವಾಗಿದ್ದರೆ, ಮತ್ತೊಂದು ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ವಿದೇಶಗಳಿಂದ ಭಾರತ ಸರ್ಕಾರ ದೇಣಿಗೆಯನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂಬುದು.

ದೇಶವಾಗಿ ನಾವು ಹಣವನ್ನು ಸ್ವೀಕರಿಸುವುದಕ್ಕಿಂತ ಹೆಚ್ಚಾಗಿ ಬೇರೆ ದೇಶಗಳಿಗೆ ನೆರವು ನೀಡಬಹುದು, ಗಲ್ಫ್ ರಾಷ್ಟ್ರದಲ್ಲಿರುವ ಶೇಕಡಾ 80ರಷ್ಟು ಭಾರತೀಯರು ಮಲೇಷಿಯಾ ಮೂಲದವರಾಗಿದ್ದಾರೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಟ್ವೀಟ್ ಮಾಡಿದ್ದರು. ಪ್ರವಾಹ ನೆರವು ಧನಸಹಾಯವನ್ನು ಒಂದು ಸೂಕ್ಷ್ಮ ವಿಷಯವಾಗಿ ಪರಿಗಣಿಸಬೇಕಾಗುತ್ತದೆ. ಬೇಡ ಎನ್ನುವುದು ಸುಲಭ, ಆದರೆ ಅಷ್ಟೊಂದು ಹಾನಿಗೊಳಗಾಗಿರುವ ಕೇರಳದ ಪರಿಸ್ಥಿತಿಯನ್ನು ಮೊದಲಿನಂತೆ ಸಹಜ ಸ್ಥಿತಿಗೆ ತರುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಪ್ರಾಕೃತಿಕ ವಿಪತ್ತು ಪರಿಹಾರಕ್ಕೆ ವಿದೇಶಗಳ ನೆರವನ್ನು ಸ್ವೀಕರಿಸದಂತೆ 2004ರಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು ದೀರ್ಘಾವಧಿಯ ಪುನರ್ವಸತಿ ಕಾರ್ಯಗಳಿಗೆ ಸ್ವೀಕರಿಸಬಹುದೆಂದು ನಿರ್ಧರಿಸಲಾಗಿತ್ತು. ಯಾವುದೇ ರಕ್ಷಣಾ ತಂಡಗಳಗಳಿಗೆ ಕೈ ಹಿಡಿಯಬೇಕಾದ ಅಗತ್ಯವಿಲ್ಲ ಮತ್ತು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ, ಆದರೆ ಮನೆಗಳನ್ನು ಮತ್ತೆ ನಿರ್ಮಿಸಲು, ಸೇತುವೆಗಳು, ರಸ್ತೆಗಳ ನಿರ್ಮಾಣ ವಿಷಯದಲ್ಲಿ ಕೇರಳದಲ್ಲಿ ಬಹಳ ದೀರ್ಘಾವಧಿಯ ಕೆಲಸವಾಗಬೇಕಿದೆ ಎಂದಿದ್ದಾರೆ.

ಸೌದಿ ಅರೇಬಿಯಾ, ಒಮನ್ ಮತ್ತು ಯುಎಇಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಟಲ್ಮಿಝ್ ಅಹ್ಮದ್ ಅವರದ್ದು ಭಿನ್ನ ಅಭಿಪ್ರಾಯ. ವಿದೇಶಗಳಿಂದ ದ್ವಿಪಕ್ಷೀಯ ಆಧಾರದಲ್ಲಿ ಸಾಮಾನ್ಯವಾಗಿ ಭಾರತ ಯಾವುದೇ ಹಣಕಾಸು ನೆರವನ್ನು ಪಡೆದಿಲ್ಲ. ಹಣದ ವಿಚಾರ ಬಂದಾಗ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದ ಸಮುದಾಯಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರಾಯಭಾರಿಗಳ ಮೂಲಕ ಅಥವಾ ಹಣವನ್ನು ನೇರವಾಗಿ ಕಳುಹಿಸಿದವರಿದ್ದಾರೆ. ಯಾವುದೇ ವಿದೇಶಗಳು ಪ್ರಕೃತಿ ವಿಕೋಪಕ್ಕೆ ಧನ ಸಹಾಯ ನೀಡಿದ ನೆನಪು ನನಗೆ ಬರುತ್ತಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ನಿಲುವು ಸರಿಯಾಗಿದೆ ಎನ್ನುತ್ತಾರೆ ಅಹ್ಮದ್. ನಮಗೆ ಆರ್ಥಿಕ ಸಹಾಯ ಬೇಕಾಗಿಲ್ಲ. ನಮ್ಮ ದೇಶದ ಜನರನ್ನು ನೋಡಿಕೊಳ್ಳುವಷ್ಟು ನಮ್ಮಲ್ಲಿ ಆರ್ಥಿಕತೆ ಸುಭದ್ರವಾಗಿದೆ. ನಮಗೆ ಪರಿಹಾರ ಸಾಮಗ್ರಿಗಳ ಪೂರೈಕೆಯಾಗಬೇಕಾಗಿದೆ. ಲಾತೂರು ಮತ್ತು ಭುಜ್ ನಲ್ಲಿ ಭೂಕಂಪವಾಗಿದ್ದಾಗ ಗಲ್ಫ್ ದೇಶದಿಂದ ಭಾರತ ಅನೇಕ ವಸ್ತುಗಳನ್ನು ಪಡೆದುಕೊಂಡಿತ್ತು. ಟಿವಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನೋಡಿ ಯುಎಇ ಸರ್ಕಾರ ಹಠಾತ್ತಾಗಿ ಸರ್ಕಾರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆಸದೆ ನೆರವು ನೀಡಲು ಮುಂದಾಗಿದೆ ಎಂದು ನನಗನ್ನಿಸುತ್ತಿದೆ ಎಂದಿದ್ದಾರೆ.

ಆದರೆ ಬದಲಿ ನೀತಿ ಕೇಂದ್ರದ ಸ್ಥಾಪಕಾಧ್ಯಕ್ಷ ಮೋಹನ್ ಗುರುಸ್ವಾಮಿ ಕೇಂದ್ರ ಸರ್ಕಾರವನ್ನು ಆರೋಪಿಸುತ್ತಾರೆ, ಸರ್ಕಾರ ಇಲ್ಲಿ ರಾಜಕೀಯ ಮಾಡುತ್ತಿದೆ ಎಂದು ನನಗನ್ನಿಸುತ್ತಿದೆ. ಸರ್ಕಾರ ಯುಎಇ ನೀಡಿದ ಹಣವನ್ನು ಸುಮ್ಮನೆ ಸ್ವೀಕರಿಸಬಹುದಾಗಿತ್ತು ಅಥವಾ ಪರಿಹಾರ ಕಾರ್ಯಕ್ಕೆ ದೀರ್ಘಾವಧಿಗೆಂದು ಹೂಡಿಕೆ ಮಾಡಬಹುದಾಗಿತ್ತು. ಅದು ಬಿಟ್ಟು ಬೇಡ ಎಂದು ಸಾರಾಸಗಟಾಗಿ ತಳ್ಳಿ ಹಾಕುವುದು ಅಗೌರವದ ವರ್ತನೆ, ಕೇಂದ್ರ ಸರ್ಕಾರ ಕೇರಳಕ್ಕೆ ಕೇವಲ 500 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದೆಯಷ್ಟೆ, ಅದು ಅಷ್ಟು ಹಾನಿಗೀಡಾದ ಕೇರಳಕ್ಕೆ ಅಲ್ಪಮೊತ್ತವಷ್ಟೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com