ಪಂಚಾಯತ್ ಚುನಾವಣೆ ಕುರಿತ ಸುಪ್ರೀಂ ತೀರ್ಪು: ಪ್ರಜಾಪ್ರಭುತ್ವದ ಜಯ ಎಂದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು"ಪ್ರಜಾಪ್ರಭುತ್ವ ಮತ್ತು ಜನತೆಯ ವಿಜಯ" ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ....
ಮಮತಾ ಬ್ಯಾನರ್ಜಿ,
ಮಮತಾ ಬ್ಯಾನರ್ಜಿ,
ಕೋಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು"ಪ್ರಜಾಪ್ರಭುತ್ವ ಮತ್ತು ಜನತೆಯ ವಿಜಯ" ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ.
ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ ವಾದಿ ಪಕ್ಷಗಳು ರಾಜ್ಯದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಎದುರು ನೊಡುತ್ತಲಿದೆ ಎಂದ ಮಮತಾ ಇದಕ್ಕಾಗಿ ಪಂಚಾಯತ್ ಚುನಾವಣೆ ನೆಪದಲ್ಲಿ ಅವುಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವೆಂದು ಆರೋಪಿಸಿದ್ದಾರೆ.
ಈ ಪಕ್ಷಗಳು ಉದ್ದೇಶಪೂರ್ವಕವಾಗಿ ಸುಳ್ಳು ಅಭಿಯಾನ ಕೈಗೊಂಡಿದ್ದವು. ಇಂದಿನ ಸುಪ್ರೀಂ ತೀರ್ಪು ಅವರಿಗೆ ತಕ್ಕ ಪಾಠವಾಗಿದೆ ಎಂದರು.
"ಇದು ಜನರ ಪ್ರಜಾಪ್ರಭುತ್ವದ ಜಯ. ಎಂದು ನಾನು ಭಾವಿಸುತ್ತೇನೆ, ದೇಶದ ಜನರಿಗೆ ಅದನ್ನು ಅರ್ಪಿಸಲು ನಾನು ಬಯಸುತ್ತೇನೆ" ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚಿನಾವಣೆ ಫಲಿತಾಂಶ ರದ್ದತಿಗೆ ಸುಪ್ರೀಂ ನಕಾರ
ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸುಮಾರು 20,000 ಕ್ಕೂ ಅಧಿಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರ ಹಿಂದೆ ಅಕ್ರಮ ರಾಜಕೀಯ ಪಿತೂರಿ ಇದೆ ಎಂದು ವಾದಿಸಿದ್ದ ಸಿಪಿಐ-ಎಂ ಮತ್ತು ಬಿಜೆಪಿ ಚುನಾವಣೆ ಫಲಿತಾಂಶ ತಡೆಹಿಡಿಯಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದ್ದವು.
ವಿಚಾರಣೆ ಮುಗಿಸಿ ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು "ಚುನಾವಣಾ ಫಲಿತಾಂಶ ರದ್ದತಿ ಸಾಧ್ಯವಿಲ್ಲ, ಅಸಮಾಧಾನಗೊಂಡ ಅಭ್ಯರ್ಥಿಗಳು ತಾವು ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಅವಕಾಶವಿದೆ" ಎಂದಿದೆ.
ಚುನಾವಣೆ ಸಂಬಂಧಿ ವಿವಾದಗಳಲ್ಲಿ ಮೂವತ್ತು ದಿನಗಳ ಕಾಲಮಿತಿಯೊಳಗೆ ತೀರ್ಪು ನೀಡಬೇಕೆನ್ನುವ ನಿಯಮವಿದೆ. ಈ ಪ್ರಕರಣದಲ್ಲಿ ಕಾಲಮಿತಿ ಮುಕ್ತಾಯಗೊಂಡ ಕಾರಣ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠ ಸಂವಿಧಾನದ 142ನೇ ಪರಿಚ್ಚೇಧದ ಅಡಿ ವಿಶೇಷ ಅಧಿಕಾರ ಬಳಸಿ ವಿಚಾರಣೆ ನಡೆಸಿತ್ತು.
ಕಳೆದ ಮೇ ನಲ್ಲಿ ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಒತ್ಟಾರೆ 58692 ಸ್ಥಾನಗಳಲ್ಲಿ 20159 ಸ್ಥಾನದ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com