ಅಕ್ಟೋಬರ್ 25ಕ್ಕೆ 'ಸ್ಟ್ಯಾಚ್ಯು ಆಫ್ ಯೂನಿಟಿ' ಕಾಮಗಾರಿ ಪೂರ್ಣ

ಅಕ್ಟೋಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಏಕತೆಯ ಪ್ರತಿಮೆ (ಸ್ಟ್ಯಾಚ್ಯು ಆಫ್ ಯೂನಿಟಿ) ಕಾಮಗಾರಿ ಪೂರ್ಣಗೊಳ್ಳಲ್ಲಿದ್ದು, ಅಕ್ಟೋಬರ್ 31ರಂದು ಲೋಕಾರ್ಪಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹ್ಮದಾಬಾದ್: ಅಕ್ಟೋಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಏಕತೆಯ ಪ್ರತಿಮೆ (ಸ್ಟ್ಯಾಚ್ಯು ಆಫ್ ಯೂನಿಟಿ) ಕಾಮಗಾರಿ ಪೂರ್ಣಗೊಳ್ಳಲ್ಲಿದ್ದು, ಅಕ್ಟೋಬರ್ 31ರಂದು ಲೋಕಾರ್ಪಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 182 ಮೀಟರ್ ಉದ್ದದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ವಿಗ್ರಹ ಮತ್ತು ಸ್ಮಾರಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಕ್ಚೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಮತ್ತು ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕಾಮಗಾರಿ ಸ್ಥಳಕ್ಕೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಸಿಎಂ ವಿಜಯ್ ರೂಪಾನಿ ಅವರು, ಸೆಪ್ಟೆಂಬರ್ 10ರೊಳಗೆ ಉಕ್ಕಿನ ಪ್ರತಿಮ ಕಾರ್ಯ ಪೂರ್ಣಗೊಳ್ಳಲ್ಲಿದ್ದು, ಅಕ್ಟೋಬರ್ 20ರೊಳಗೆ ಅದರ ಕಂಚಿನ ಲೇಪನ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ನರ್ಮದಾ ಜಿಲ್ಲೆಯ ನರ್ಮದಾ ನದಿಯಲ್ಲಿನ ಸಾಧು ಬೆಟ್ ಎಂಬ ಪುಟ್ಟ ದ್ವೀಪದಲ್ಲಿ ಈ ಬೃಹತ್ ಸ್ಮಾರಕ ನಿರ್ಮಾಣವಾಗಿದ್ದು, ಸರ್ದಾರ್ ಸರೋವರ ಡ್ಯಾಂನಿಂದ ಈ ದ್ವೀಪ ಕೇವಲ 1 ಕಿ.ಮೀ ದೂರದಲ್ಲಿದೆ. ಈ ಯೋಜನೆಗಾಗಿ 1,989 ಕೋಟಿ ರೂ ವೆಚ್ಚ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com