ನೌಕಪಡೆಗೆ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 111 ಹೆಲಿಕಾಪ್ಟರ್ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೌಕಪಡೆಗಾಗಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಸಲು ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೌಕಪಡೆಗಾಗಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಸಲು ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ.

ಹೆಲಿಕಾಪ್ಟರ್ ಸ್ವಾಧೀನ ಸೇರಿದಂತೆ ಸುಮಾರು 46 ಸಾವಿರ ಕೋಟಿ ರೂಪಾಯಿ ಮೌಲ್ಯದ ಖರೀದಿ ಪ್ರಸ್ತಾವವನ್ನು ಸಚಿವಾಲಯ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. ರಕ್ಷಣಾ ಇಲಾಖೆಯ (ಡಿಎಸಿ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತೀಯ ನೌಕಪಡೆಗಾಗಿ ಸುಮಾರು 21 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಗೆ ರಕ್ಷಣಾ ಇಲಾಖೆಯ ಸಭೆ ಅನುಮೋದನೆ ನೀಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಗಾಗಿ ಅಂದಾಜು 3, 364 ಕೋಟಿ ರೂ. ವೆಚ್ಚದಲ್ಲಿ ಸ್ವದೇಶಿ ವಿನ್ಯಾಸ ಹಾಗೂ ಅಭಿವೃದ್ದಿಯ 155 ಎಂಎಂ ಎಳೆದ ಫಿರಂಗಿ ಗನ್ ವ್ಯವಸ್ಥೆಯ ಸ್ವಾಧೀನ ಸೇರಿದಂತೆ  ಅಂದಾಜು 24, 879 ಕೋಟಿ ರೂ. ವೆಚ್ಚದಲ್ಲಿ ಇನ್ನಿತರ ಖರೀದಿ ಪ್ರಸ್ತಾವನೆಗೆ ರಕ್ಷಣಾ ಇಲಾಖೆ ಸಭೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com