ಪ್ರಯೋಗಾಲಯದಲ್ಲಿ ಬೆಳೆದ ಮಾಂಸ ಸೇವನೆಯಿಂದ ಪ್ರಾಣಿಹತ್ಯೆ ತಡೆಗಟ್ಟಬಹುದು; ಕೇಂದ್ರ ಸಚಿವೆ ಮನೇಕಾ ಗಾಂಧಿ

ಪ್ರಯೋಗಾಲಯಗಳಲ್ಲಿ ಮಾಂಸವನ್ನು ತಯಾರಿಸುವ ಮೂಲಕ ಗೋ ಸಂರಕ್ಷಣಾ ಸಂಘಟನೆಗಳಿಂದ ...
ಮನೇಕಾ ಗಾಂಧಿ
ಮನೇಕಾ ಗಾಂಧಿ
Updated on

ಹೈದರಾಬಾದ್: ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಕೋಶದಿಂದ ತಯಾರಾದ ಮಾಂಸ ಸೇವನೆ ಮೂಲಕ ಗೋ ಸಂರಕ್ಷಣಾ ಸಂಘಟನೆಗಳಿಂದ ಸಾಮೂಹಿಕ ಹತ್ಯೆ, ಆಕ್ರಮಣ ಮತ್ತು ಬೆದರಿಕೆಗಳಂತಹ ಹಿಂಸಾತ್ಮಕ ಕ್ರಮಗಳನ್ನು ತಡೆಗಟ್ಟಬಹುದು ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಅವರು ನಿನ್ನೆ ಹೈದರಾಬಾದಿನ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಬಯಾಲಜಿ(ಸಿಸಿಎಂಬಿ) ಕೇಂದ್ರದಲ್ಲಿ ಪ್ರೊಟೀನ್ ಶೃಂಗಸಭೆಯ ಭವಿಷ್ಯ ಕುರಿತ ಸೆಮಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಇಂದು ಪ್ರತಿದಿನ ಸುಮಾರು 11 ಕೋಟಿ ಪ್ರಾಣಿಗಳನ್ನು ಸೇವನೆಗಾಗಿ ಬಳಸಲಾಗುತ್ತದೆ. ಮಾಂಸದ ಬೇಡಿಕೆ ಹೆಚ್ಚಾದಂತೆ ಕೊಲ್ಲುವ ಪ್ರಮಾಣ ಜಾಸ್ತಿಯಾಗಿ ಪ್ರಾಣಿ ಸಂರಕ್ಷಣಾ ಹೋರಾಟಗಾರರಿಂದ ವ್ಯಾಪಕ ಹಿಂಸೆ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ, ಸಂಯಮ ಹಾಳಾಗುತ್ತದೆ. ಇದನ್ನು ತಡೆಯಲು ಮಾಂಸಕ್ಕೆ ಪರ್ಯಾಯ ವಸ್ತುವನ್ನು ಕಂಡುಹಿಡಿಯುವುದು ಇಂದು ತುಂಬಾ ಮುಖ್ಯವಾಗಿದೆ. ನಾವು ಸಂಸ್ಕರಿತ ಮಾಂಸವನ್ನು(cultured meat) ಮತ್ತು ಪ್ರಯೋಗಾಲಯಗಳಲ್ಲಿ ತಯಾರಾದ ಮಾಂಸವನ್ನು ಹೆಚ್ಚು ಬಳಸಬೇಕು. ಇಲ್ಲದಿದ್ದರೆ ಭಾರತದಲ್ಲಿ ಸಹ ಭಯೋತ್ಪಾದಕ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸ್ಕರಿತ ಮಾಂಸ, ವಿರ್ಟೊ ಮೀಟ್ ಹೊಸ ಮತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಸೆಲ್ಯುಲಾರ್ ತಂತ್ರಜ್ಞಾನದ ಪ್ರಕಾರವಾಗಿದ್ದು ಪ್ರಾಣಿಗಳ ಕೋಶವನ್ನು ಮಾಂಸ ಕೋಶದ ಉತ್ಪಾದನೆಗಾಗಿ ಮಾತ್ರ ಬಳಸಲಾಗುತ್ತದೆ. ಪ್ರಾಣಿಗಳ ಕೋಶವನ್ನು ತೆಗೆದು ಪ್ರಯೋಗಾಲಯಗಳಲ್ಲಿ ಬೆಳೆಸಲಾಗುತ್ತದೆ. ಈ ತಂತ್ರಜ್ಞಾನ ಅಮೆರಿಕಾ ಮತ್ತು ಯುರೋಪ್ ಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಭಾರತದಲ್ಲಿ ಇನ್ನೂ ಜನಪ್ರಿಯವಾಗಿಲ್ಲ.

ಸಂಸ್ಕರಿತ ಮಾಂಸವನ್ನು ಕೇವಲ ಸೇವನೆಗೆ ಮಾತ್ರವಲ್ಲದೆ ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಪಡಿಸಲು ಕೂಡ ಬಳಸಬಹುದು ಎಂದು ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಭಾರತದಲ್ಲಿ ಸಿಸಿಎಂಬಿಯಂತಹ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ನಾವು ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಮತ್ತು ಗುಡ್ ಫುಡ್ ಇನ್ಸ್ ಟಿಟ್ಯೂಟ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಜನರನ್ನು ಹೆಚ್ಚೆಚ್ಚು ಈ ತಂತ್ರಜ್ಞಾನಗಳತ್ತ ಸೆಳೆಯಲು ಯತ್ನಿಸುತ್ತಿದ್ದೇವೆ. ಇದಕ್ಕೆ ಸ್ಟಾರ್ಟ್ ಅಪ್ ಸಂಸ್ಥೆಗಳು ಸಹಾಯವಾಗಬಹುದು ಎನ್ನುತ್ತಾರೆ ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com