ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಅಡ್ಡಿಯಾಗಬಾರದು ಎಂದು ವಾಜಪೇಯಿ ಸಾವು ಮರೆಮಾಚಿದರೇ?

ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ವಿಚಾರವನ್ನು ತಡವಾಗಿ ಘೋಷಣೆ ಮಾಡಿದರೇ ಎಂದು ಶಿವಸೇನೆ ಗಂಭೀರ ಪ್ರಶ್ನೆ ಕೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿನ ವಿಚಾರವನ್ನು ತಡವಾಗಿ ಘೋಷಣೆ ಮಾಡಿದರೇ ಎಂದು ಶಿವಸೇನೆ ಗಂಭೀರ ಪ್ರಶ್ನೆ ಕೇಳಿದೆ.
ಈ ಬಗ್ಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಸ್ವರಾಜ್ಯ ಎಂದರೇನು ಎಂಬ ಶೀರ್ಷಿಕೆಯಡಿಯಲ್ಲಿ ಮರಾಠಿಯಲ್ಲಿ ಲೇಖನ ಬರೆದಿದ್ದು. ಲೇಖನದಲ್ಲಿ ಹಲವು ಗಂಭೀರ ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಪ್ರಮುಖವಾಗಿ ಅವರು ವಾಜಪೇಯಿ ಅವರ ಸಾವಿನ ಕುರಿತು ಆಗಸ್ಟ್ 16ರಂದು ಘೋಷಣೆ ಮಾಡಲಾಗಿತ್ತು. ಆದರೆ ವಾಜಪೇಯಿ ಅವರ ಸಾವು ನಿಜಕ್ಕೂ ಆಗಸ್ಟ್ 16ರಂದೇ ಆಗಿತ್ತೇ.. ಆಗಸ್ಟ್ 12 ಮತ್ತು 13ರಂದು ವಾಜಪೇಯಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಆದರೆ ಆಗಸ್ಟ್ 16ರಂದು ಅವರ ಸಾವಿನ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ ವಾಜಪೇಯಿ ಅವರ ಸಾವಿನ ಕುರಿತು ತಡವಾಗಿ ಘೋಷಣೆ ಮಾಡಿರುವ ಸಾಧ್ಯತೆ ಇದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೂ ಪೂರಕ ಅಂಶಗಳನ್ನು ಒದಗಿಸಿರುವ ರಾವತ್, ಪ್ರಧಾನಿ ಮೋದಿ ಅವರ ಆಗಸ್ಟ್ 15ರ ಭಾಷಣಕ್ಕೆ ಅಡ್ಡಿಯಾಗಬಾರದು ಎಂದು ವಾಜಪೇಯಿ ಅವರ ಸಾವಿನ ವಿಚಾರದ ಘೋಷಣೆಯನ್ನು ತಡವಾಗಿ ಮಾಡಿರಬಹುದು ಎಂದು ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ. 
ಅಂತೆಯೇ ಫಾರೂಕ್ ಅಬ್ದುಲ್ಲಾ ಅವರ ಮೇಲಿನ ಹಲ್ಲೆ ಕುರಿತು ವರದಿಯಲ್ಲಿ ಉಲ್ಲೇಖ ಮಾಡಿರುವ ರಾವತ್, ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದಿದ್ದಕ್ಕೇ ಫಾರೂಕ್ ಅಬ್ದುಲ್ಲಾ ಮೇಲೆ ಹಲ್ಲೆ ಮಾಡಲಾಗಿದೆ. ಆದರೆ ಹಲ್ಲೆಗೈದ ದುಷ್ಕರ್ಮಿಗಳಿಗೆ ಸರ್ಕಾರವೇ ನೆರವು ನೀಡುತ್ತಿದೆ ಎಂದೂ ಆರೋಪ ಮಾಡಿದ್ದಾರೆ. 
ಇದೇ ವೇಳೆ ಪ್ರಧಾನಿ ಮೋದಿ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿರುವ ರಾವತ್,  ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸಾಕಷ್ಚು ಆಶ್ವಾಸನೆಗಳನ್ನು ನೀಡಿದ್ದಾರೆ. ಅಂತೆಯೇ ಈ ಹಿಂದಿನ ಸರ್ಕಾರಗಳು ಏನೂ ಮಾಡಿಲ್ಲ ಎಂದು ಬಿಂಬಿಸಿದ್ದಾರೆ. ಹಾಗಾದರೇ ಈ ವರೆಗೂ ಸಿಕ್ಕ ಸ್ವಾತಂತ್ರ್ಯ ನಿಶ್ಪ್ರಯೋಜಕವೇ ಎಂದು ಪ್ರಶ್ನಿಸಿದ್ದಾರೆ. 
'ಜನರಿಗಿಂತ ಹೆಚ್ಚಾಗಿ ನಮ್ಮನ್ನಾಳುವವರಿಗೆ ‘ಸ್ವರಾಜ್ಯ’ದ ಬಗ್ಗೆ ತಿಳಿದಿರಬೇಕು. ಆಗಸ್ಟ್ 16ರಂದು ವಾಜಪೇಯಿ ನಿಧನರಾದರು. ಆದರೆ 12-13 ಆಗಸ್ಟ್ ನಿಂದಲೇ ಅವರ ಸ್ಥಿತಿ ಗಂಭೀರವಾಗಿತ್ತು. ರಾಷ್ಟ್ರೀಯ ಶೋಕಾಚರಣೆಯನ್ನು ತಪ್ಪಿಸಲು, ಸ್ವಾತಂತ್ರ್ಯೋತ್ಸವ ದಿನ ಧ್ವಜವನ್ನು ಕೆಳಕ್ಕಿಳಿಸುವುದನ್ನು ತಪ್ಪಿಸಲು ಹಾಗು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣ ಮಾಡುವುದಕ್ಕಾಗಿ ವಾಜಪೇಯಿ ಆಗಸ್ಟ್ 16ರಂದು ನಮ್ಮನ್ನಗಲಿದರು (ಅಥವಾ ಅವರ ನಿಧನ ವಾರ್ತೆ ಘೋಷಿಸಲಾಯಿತು' ಎಂದು ರಾವತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com