ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ರೆಡ್ ಕಾರ್ನರ್ ನೋಟೀಸ್ ಅಗತ್ಯವಿಲ್ಲ: ಸಿಬಿಐ

ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರದ ವ್ಯಾಪಾರಿ ದೇಶಭ್ರಷ್ಟ ಬಿಲಿಯನೇರ್ ಮೆಹುಲ್ ಚೋಕ್ಸಿಯನ್ನು ಇಂತರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇಲ್ಲ....
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರದ ವ್ಯಾಪಾರಿ ದೇಶಭ್ರಷ್ಟ ಬಿಲಿಯನೇರ್ ಮೆಹುಲ್ ಚೋಕ್ಸಿಯನ್ನು ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇಲ್ಲದೆಯೂ ಭಾರತಕ್ಕೆ ಕರೆತರಬಹುದು. ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಲು ರೆಡ್ ಕಾರ್ನರ್ ನೋಟೀಸು ಅತ್ಯಗತ್ಯವಾಗಿಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದೆ.
ಈ ತಿಂಗಳು ಪ್ರಾರಂಬದಲ್ಲಿ ಸಚಿವಾಲಯದೊಡನೆ ನಡೆಸಿದ ಸಂವಹನದಲ್ಲಿ ಸಿಬಿಐ ಈ ಮಾಹಿತಿ ನೀಡಿದೆ.ಇದಾಗಲೇ ಆಂಟಿಗುವಾ ಇದಾಗಲೇ ಚೋಕ್ಸಿ ತನ್ನ ನಾಗರಿಕ  ಎಂದು ಖಾತರಿ ಪಡಿಸಿದ್ದರಿಂಡ ರೆಡ್ ಕಾರ್ನರ್ ನೋಟೀಸಿನ ಅಗತ್ಯವಿಲ್ಲ ಎಂದು ಹೇಳಿದೆ.
ಆಂಟಿಗುವಾ ಅವರಿಗೆ ಪೌರತ್ವವನ್ನು ನೀಡಿದೆ ಮತ್ತು ಚೋಕ್ಸಿ ಈಗ ಆಂಟಿಗುವಾ ಪಾಸ್ ಪೋರ್ಟ್ ಹೊಂದಿದ್ದಾನೆ.ಹೀಗಾಗಿ ಆರ್ ಸಿಎನ್ ಹೊಂದಿರುವುದು ಕಡಿಮೆ ಮೌಲ್ಯವಾಗಿ ಕಾಣುತ್ತದೆ.ಎಂದು ಸಿಬಿಐ ಹೇಳಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸುಮಾರು 2 ಶತಕೋಟಿ ಅಮೆರಿಕನ್ ಡಾಲರ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚೋಕ್ಸಿಯ ಬಂಧನಕ್ಕಾಗಿ ಸಿಬಿಐ ಆಂಟಿಗುವಾದ ತನಿಖಾ ಸಂಸ್ಥೆಗೆ ಇದಾಗಲೇ ಪತ್ರ ಬರೆದಿದೆ ಎಂದೂ ತನಿಖಾ ಸಂಸ್ಥೆ  ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಇನ್ನು ತನ್ನ ಮೇಲಿನ ಆರೋಪ ರಾಜಕೀಯ ಪ್ರೇರಣೆಗೆ ಒಳಗಾಗಿರುವ ಕಾರಣ ಆರ್ ಪಿಎಸ್ ಹೊರಡಿಸಬಾರದೆಂದು ಚೋಕ್ಸಿ ಇಂಟರ್ ಪೋಲ್ ಗೆ ಮನವಿ ನಾಡಿದ್ದಾರೆ. ಭಾರತದಲ್ಲಿ ಜೈಲುಗಳ ಪರಿಸ್ಥಿತಿಗಳು ಉತ್ತಮವಿಲ್ಲ, ಅವುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೂ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ನೀರವ್ ಮೋದಿ ಚಿಕ್ಕಪ್ಪ, ವಜ್ರದ ವ್ಯಾಪಾರಿ ಚೋಕ್ಸಿ ಮಾದ್ಯಮಗಳ ವಿರುದ್ಧ ಹರಿಹಾಯ್ದಿದ್ದು ಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯುವ ಭರವಸೆ ನನಗಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com