ಮಧ್ಯಪ್ರದೇಶ: ಎಲ್ಲಾ ರೋಗಿಗಳಿಗೂ ಒಂದೇ ಸಿರಿಂಜ್ ಬಳಕೆ; ಒಬ್ಬರು ಸಾವು, 25 ಜನರ ಸ್ಥಿತಿ ಗಂಭೀರ

ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಎಲ್ಲಾರಿಗೂ ಒಂದೇ ಸಿರಿಂಜ್ ಬಳಕೆ ಮಾಡಿದ್ದರಿಂದ ಒಬ್ಬರು ಸಾವನ್ನಪ್ಪಿದ್ದು, ಇನ್ನಿತರ 25 ಮಂದಿ ಪರಿಸ್ಥಿತಿ ಗಂಭೀರವಾಗಿದೆ.
ಆಸ್ಪತ್ರೆಯ ಚಿತ್ರ
ಆಸ್ಪತ್ರೆಯ ಚಿತ್ರ

ದಾಟಿಯಾ: ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಎಲ್ಲಾ ರೋಗಿಗಳಿಗೂ ರಿಗೂ ಒಂದೇ ಸಿರಿಂಜ್ ಬಳಕೆ ಮಾಡಿದ್ದರಿಂದ ಒಬ್ಬರು ಸಾವನ್ನಪ್ಪಿದ್ದು, ಇನ್ನಿತರ 25 ಮಂದಿ ಪರಿಸ್ಥಿತಿ ಗಂಭೀರವಾಗಿದೆ.

ನರ್ಸ್ ಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಸರ್ಜನ್ ಡಾ. ಪಿ. ಕೆ. ಶರ್ಮಾ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ಆಸ್ಪತ್ರೆಯಲ್ಲಿನ ನರ್ಸ್ ಗಳು ಶುದ್ದೀಕರಿಸಿದ ನೀರಿನ ಬದಲಿಗೆ ಸಾಮಾನ್ಯ ನೀರನ್ನೇ ಬಳಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲಾರಿಗೂ ಒಂದೇ ಸಿರಿಂಜ್ ಬಳಸಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉಡಾಫೆಯಿಂದ ನರ್ಸ್ ಗಳು ಎಲ್ಲರಿಗೂ ಒಂದೇ ಸಿರಿಂಜ್ ಬಳಕೆ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತನಿಖೆ ಮುಂದುವರೆದಿದ್ದು, ವೈದ್ಯಕೀಯ ಮಂಡಳಿಯಿಂದ ವರದಿಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com