ತೈಲ ಬೆಲೆ ಏರಿಕೆ: ಮೋದಿಯ 'ಅಚ್ಛೇ ದಿನ್' ಅಣಕಿಸಿದ ಶಿವಸೇನೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ದೇಶದ ಜನತೆಗೆ ಅಚ್ಛೇ ದಿನ್...
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ
ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ದೇಶದ ಜನತೆಗೆ ಅಚ್ಛೇ ದಿನ್(ಒಳ್ಳೆಯ ದಿನಗಳು) ಬರದಿದ್ದರೂ ಪರವಾಗಿಲ್ಲ. ನಾಗರಿಕರಿಗೆ ಸ್ಥಿರವಾದ ಜೀವನ ಖಾತ್ರಿಪಡಿಸಿ ಎಂದು ಶಿವಸೇನೆ ತನ್ನ ಮಿತ್ರ ಪಕ್ಷ ಬಿಜೆಪಿಗೆ ಒತ್ತಾಯಿಸಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಗೂ ಎನ್ ಡಿಎ ಅವಧಿಯ ತೈಲ ಬೆಲೆ ಏರಿಕೆಯ ವಿವರವನ್ನು ಹಾಕುವಂತೆ ಪೆಟ್ರೋಲ್ ಬಂಕ್ ಗಳಿಗೆ ಕೇಳಿಕೊಂಡಿರುವುದಾಗಿ ಶಿವಸೇನೆ ತಿಳಿಸಿದೆ.
ಪ್ರಧಾನಿ ಮೋದಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆಗೆ ಅಚ್ಛೇ ದಿನ್ ಭರವಸೆ ನೀಡಿದ್ದರು. ಆದರೆ ತೈಲ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಿದೆ.
ಅಚ್ಛೇ ದಿನ್ ಅಂದರೆ ಏನು? ಜನರು ಕನಿಷ್ಠ ಹಣದಿಂದ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರಬೇಕು. ಅವರ ಜೀವನ ಸ್ಥಿರವಾಗಿರಬೇಕು ಮತ್ತು ಜೀವನ ಗುಣಮಟ್ಟ ಸುಧಾರಣೆಯಾಗಬೇಕು. ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿಇದರಲ್ಲಿ ಒಂದನ್ನಾದರೂ ಮಾಡಿದೆಯೇ? ಎಂದು ಶಿವಸೇನೆ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com