ನೋಟು ನಿಷೇಧದಿಂದಾಗಿ ಆರ್ಥಿಕತೆ ಸುಗಮ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ: ಅರುಣ್ ಜೇಟ್ಲಿ

ನೋಟು ನಿಷೇಧದಿಂದ ಸರ್ಕಾರ ಸಾಧಿಸಿದ ಸಾಧನೆಯಾದರೂ ಏನು ಎಂಬ ಟೀಕಿಗೆ ಉತ್ತರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸುಗಮವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನೋಟು ನಿಷೇಧದಿಂದ ಸರ್ಕಾರ ಸಾಧಿಸಿದ ಸಾಧನೆಯಾದರೂ ಏನು ಎಂಬ ಟೀಕಿಗೆ ಉತ್ತರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು, ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಸುಗಮವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ನಿಷೇಧ ಸಂಬಂಧ ತನ್ನ ವರದಿ ನೀಡಿ, ನಿಷೇಧವಾಗಿದ್ದ ಬಹುತೇಕ ಎಲ್ಲ 500 ಮತ್ತು ಸಾವಿರ ಮುಖಬೆಲೆಯ ನೋಟುಗಳು ಬ್ಯಾಂಕ್ ಗೆ ಜಮೆಯಾಗಿದೆ ಎಂದು ವರದಿ ನೀಡಿತ್ತು. ಈ ವರದಿ ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿತ್ತು. ಅಲ್ಲದೆ ಸರ್ಕಾರ ಈ ಕಠಿಣ ಕ್ರಮದಿಂದ ಏನು ಸಾಧನೆ ಮಾಡಿತು ಎಂಬ ವ್ಯಾಪಕ ಟೀಕೆಗಳೂ ಕೂಡ ಕೇಳಿಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಅರುಣ್ ಜೇಟ್ಲಿ ಅವರು, ನೋಟು ನಿಷೇಧ ಕ್ರಮಕ್ಕೆ ಸಂಬಂಧಿಸಿದಂತೆ ನಾನಾ ಬಗೆಯ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಕ್ರಮದಿಂದಾಗಿ ಇಂದು ದೇಶದ ಆರ್ಥಿಕತೆ ಸುಗಮವಾಗಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವಂತಾಗಿದೆ. ತೆರಿಗೆ ಸಂಗ್ರಹವನ್ನೇ ಕೇಂದ್ರವಾಗಿಟ್ಟುಕೊಂಡು ನೋಟು ನಿಷೇಧ ಮಾಡಲಾಗಿತ್ತು. ಅಲ್ಲದೆ ಕಪ್ಪುಹಣ ಹೊರಗೆಳೆಯುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಈ ಪೈಕಿ ನಾವು ಯಶಸ್ಸುಕೂಡ ಆಗಿದ್ದೇವೆ. ಸ್ವಿಸ್ ಬ್ಯಾಂಕ್ ನಲ್ಲಿದ್ದ ಭಾರತೀಯರ ಠೇವಣಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿದರು.
ನೋಟು ನಿಷೇಧಕ್ಕೂ ಮೊದಲ 2 ವರ್ಷಗಳ ಅವಧಿಯಲ್ಲಿ ತೆರಿಗೆ ಸಂಗ್ರಹ ಅಭಿವೃದ್ಧಿ ದರ ಶೇ.6.6ರಿಂದ ಶೇ.9ರಷ್ಟಿತ್ತು, ಆದರೆ ನೋಟು ನಿಷೇಧದ ಬಳಿಕ ಈ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಏರಿಕೆಯಾಗಿದೆ.  ಐಟಿ ಸಲ್ಲಿಕ್ಕೆ ಅರ್ಜಿಗಳ ಸಂಖ್ಯೆ 3.8ಕೋಟಿಗಳಿಗೇರಿದೆ. ಈ ಪ್ರಮಾಣ 2017-18ನೇ ಸಾಲಿನಲ್ಲಿ 6.86ಕ್ಕೆ ಏರಿಕೆಯಾಗಿದೆ. ಆ ಮೂಲಕ ತೆರಿಗೆ ಸಲ್ಲಿಕೆ ಅಭಿವೃದ್ಧಿಯಲ್ಲೂ ಶೇ.19ರಿಂದ 25ರಷ್ಟು ಏರಿಕೆಯಾಗಿದೆ ಎಂಬುದು ಗಮನಾರ್ಹ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com