ಡೆಡ್‏ಲೈನ್ ವಿಸ್ತರಣೆಗೆ 'ಸುಪ್ರೀಂ' ನಕಾರ: ನಾಳೆಯಿಂದ ಹೊಸ ವಾಹನ ವಿಮಾ ನೀತಿ ಜಾರಿ

ನಾಳೆಯಿಂದ ಹೊಸ ಕಾರು ಮತ್ತು ದ್ವಿ ಚಕ್ರವಾಹನಗಳು ಕ್ರಮವಾಗಿ ಮೂರು ಮತ್ತು ಐದು ವರ್ಷಗಳ ಅವಧಿಯ ಥರ್ಢ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು ಕಡ್ಡಾಯವಾಗಿದ್ದು, ಗಡವು ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ :ನಾಳೆಯಿಂದ  ಹೊಸ ಕಾರು ಮತ್ತು ದ್ವಿ ಚಕ್ರವಾಹನಗಳು  ಕ್ರಮವಾಗಿ ಮೂರು ಮತ್ತು ಐದು ವರ್ಷಗಳ ಅವಧಿಯ  ಥರ್ಢ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು ಕಡ್ಡಾಯವಾಗಿದ್ದು,  ಗಡವು ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದಿಂದ 1938ರ ವಿಮೆ ಕಾಯ್ದೆ ವಿನಾಯಿತಿ ಅಡಿಯಲ್ಲಿ ಸ್ಥಾಪಿತಗೊಂಡಿರುವ  ಜನರಲ್ ವಿಮಾ ಸಮಿತಿ  ಗಡುವು ವಿಸ್ತರಣೆ ಕೋರಿ  ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿದ್ದ  ಅರ್ಜಿಯನ್ನು  ನ್ಯಾಯಾಧೀಶರಾದ ಮದನ್ ಬಿ ಠಾಕೂರ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.

ಈಗಿರುವ ವಿಮೆಯ ಅವಧಿ ಒಂದು ವರ್ಷದಾಗಿದ್ದು, ಹೊಸ ಕಾರುಗಳು ಮೂರು ವರ್ಷಗಳ ಅವಧಿಗೆ  ಮತ್ತು ದ್ವಿಚಕ್ರಗಳು ಐದು ವರ್ಷಗಳ ಥರ್ಡ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು  ಕಡ್ಡಾಯ ಎಂದು ಸುಪ್ರೀಂಕೋರ್ಟ್ ಜುಲೈ 20 ರಂದು ತೀರ್ಪು ನೀಡಿತ್ತು.

ನಾಳೆಯಿಂದಲೇ  ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com