ಬೆಕ್ಕಿನ ಮರಿಗಾಗಿ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರನ್ನೇ ಡ್ಯಾಮೇಜ್ ಮಾಡಿಕೊಂಡ ಉದ್ಯಮಿ!

ಬೆಕ್ಕಿನ ಮರಿಯನ್ನು ಕಾಪಾಡುವ ಸಲುವಾಗಿ ಉದ್ಯಮಿಯೊಬ್ಬರು ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರನ್ನೇ ಹಾಳು ಮಾಡಿಕೊಂಡಿದ್ದು ಬೆಕ್ಕು ಕಾಪಾಡಿ ಮಾನವೀಯತೆ ಮೆರೆದ ಉದ್ಯಮಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹಮದಾಬಾದ್: ಬೆಕ್ಕಿನ ಮರಿಯನ್ನು ಕಾಪಾಡುವ ಸಲುವಾಗಿ ಉದ್ಯಮಿಯೊಬ್ಬರು ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರನ್ನೇ ಹಾಳು ಮಾಡಿಕೊಂಡಿದ್ದು ಬೆಕ್ಕು ಕಾಪಾಡಿ ಮಾನವೀಯತೆ ಮೆರೆದ ಉದ್ಯಮಿಗೆ ನೆಟಿಗರು ಚಿಯರ್ ಹೇಳುತ್ತಿದ್ದಾರೆ. 
ಗುಜರಾತ್ ಮೂಲದ ಉದ್ಯಮಿ ಜಯೇಶ್ ಟೈಲರ್ ತಮ್ಮ ಕಾರಿನಲ್ಲಿ ಸಿಲುಕಿಕೊಂಡಿದ್ದ ಬೆಕ್ಕನ್ನು ಕಾಪಾಡುವ ಸಲುವಾಗಿ ತಮ್ಮ ಕಾರನ್ನು ಹಾಳು ಮಾಡಿದ್ದಾರೆ. ಜಯೇಶ್ ತಮ್ಮ ಕುಟುಂಬದ ಜತೆಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ತಮ್ಮ ಕಾರಿನ ಯಾವುದೋ ಮೂಲೆಯಲ್ಲಿ ಬೆಕ್ಕಿನ ಮರಿಯೊಂದು ಮಿಯಾಂವ್ ಎಂದು ಕೂಗಿದ್ದು ಜಯೇಶ್ ಗೆ ಕೇಳಿಸಿತ್ತು.
ಕಾರಿನ ಕೆಳ ಭಾಗದಲ್ಲೆಲ್ಲೋ ಬೆಕ್ಕಿನ ಮರಿ ಅಡಗಿದೆ ಎಂದು ಗೊತ್ತಾದಾಗ ನಿಧಾನವಾಗಿ ಕಾರು ಚಲಾಯಿಸಿದ ಜಯೇಶ್ ನಂತರ ಗ್ಯಾರೇಜ್ ಗೆ ಕೊಂಡೊಯ್ದು ಬೆಕ್ಕನ್ನು ಹುಡುಕಿದ್ದಾರೆ. ಕೊನೆಗೆ ಪೊಲೀಸರು ಮತ್ತು ಗ್ಯಾರೇಜ್ ಸಿಬ್ಬಂದಿಯ ಸಹಾಯದಿಂದ 6 ಗಂಟೆ ಕಾರ್ಯಚರಣೆಯ ನಂತರ ಕಾರಿನ ಕೆಳಭಾಗದಲ್ಲಿ ಅಡಗಿದ್ದ ಬೆಕ್ಕನ್ನು ರಕ್ಷಿಸಿದ್ದಾರೆ. 
ಬೆಕ್ಕನ್ನು ರಕ್ಷಿಸುವ ಸಂದರ್ಭದಲ್ಲಿ ಕಾರಿನ ಕೆಲವು ಭಾಗಗಳಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಆದರೆ ಸಣ್ಣ ಬೆಕ್ಕನ್ನು ಕಾಪಾಡುವ ಸಲುವಾಗಿ ಉದ್ಯಮಿ ತೋರಿದ ಮಾನವೀಯತೆ ಎಲ್ಲರ ಹೃದಯ ಗೆದ್ದಿದೆ. ಗ್ಯಾರೇಜ್ ನ ಸಿಬ್ಬಂದಿಯೊಬ್ಬರು ಬೆಕ್ಕು ಸಾಕಿಕೊಳ್ಳುವುದಾಗಿ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com