ಶಬರಿಮಲೆಗೆ ಋತುಮತಿ ಮಹಿಳೆಯರು, ಯುವತಿಯರ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಿ, ಎಲ್ಲ ವಯೋಮಾನದ ಮಹಿಳೆಯ ಪ್ರವೇಶಕ್ಕೆ ಅವಕಾಶ ಕೊಟ್ಟು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಮಹಿಳೆಯರ ಪ್ರವೇಶ ವಿರೋಧಿಸಿ ಬಲ ಪಂಥೀಯ ಸಂಘಟನೆಗಳು ಕೇರಳದಾದ್ಯಂತ ಪ್ರತಿಭಟನೆ ನಡೆಸಿದ್ದವು. ಶ್ರೀ ನಾರಾಯಣ ಧರ್ಮ ಪರಿಪಾಲನಾ(ಎಸ್‌ಎನ್‌ಡಿಪಿ) ಯೋಜನಂ ಸೇರಿದಂತೆ ಸಾಮಾಜಿಕ ಸಂಘಟನೆಗಳು ಹಾಗೂ ಜಾತಿ ಆಧಾರಿತ ಪ್ರಮುಖ ಸಂಘಟನೆಗಳೊಂದಿಗೆ ಕೇರಳ ಸರ್ಕಾರ ಸಭೆ ನಡೆಸಿ, ಜನವರಿ 1ರಂದು ಮಹಿಳೆಯರ ಮಹಾ ಗೋಡೆ ನಿರ್ಮಿಸಲು ನಿರ್ಧರಿಸಿದೆ.