ಸಂಸದೆ ಸಾವಿತ್ರಿ ಫುಲೆ ಬಿಜೆಪಿಗೆ ಗುಡ್ ಬೈ: ಪಕ್ಷದ ವಿರುದ್ಧ ಸಮಾಜದಲ್ಲಿ ಒಡಕು ಮೂಡಿಸುತ್ತಿರುವ ಆರೋಪ

ಹನುಮಾನ್ ದಲಿತನಾಗಿದ್ದ ಮತ್ತು ಅವನು ಮನುವಾದಿ ಜನರ ಗುಲಾಮನಾಗಿದ್ದ ಎಂದಿದ್ದ ಬಹರಾಯಿಚ್ ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.
ಸಂಸದೆ ಸಾವಿತ್ರಿ ಫುಲೆ
ಸಂಸದೆ ಸಾವಿತ್ರಿ ಫುಲೆ
ನವದೆಹಲಿ: ಹನುಮಾನ್ ದಲಿತನಾಗಿದ್ದ ಮತ್ತು ಅವನು ಮನುವಾದಿ ಜನರ ಗುಲಾಮನಾಗಿದ್ದ ಎಂದಿದ್ದ ಬಹರಾಯಿಚ್ ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ.
ಪಕ್ಷದ ವಿರುದ್ಧವೇ ಸಂಸದೆ ಸಾವಿತ್ರಿ ಬಾಯಿ ಫುಲೆ ಕೆಂಡಾಮಂಡಲರಾಗಿದ್ದು, ಬಿಜೆಪಿ ವಿರುದ್ಧ ಸಮಾಜದಲ್ಲಿ ಒಡಕುಂಟುಮಾಡುತ್ತಿರುವ ಆರೋಪ ಮಾಡಿದ್ದಾರೆ. " ನಾನು ಬಿಜೆಪಿಯನ್ನು ಇಂದು ತೊರೆಯುತ್ತಿದ್ದೇನೆ ಸಂವಿಧಾನವನ್ನು ಕೊನೆಗಾಣಿಸಿ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನೂ ಕೊನೆಗಾಣಿಸುವ ಪಿತೂರಿ ನಡೆಯುತ್ತಿದೆ ಎಂದು ಸಾವಿತ್ರಿ ಬಾಯಿ ಫುಲೆ ಗಂಭೀರ ಆರೋಪ ಮಾಡಿದ್ದಾರೆ. 
ಡಿ.23 ರಂದು ಲಖನೌ ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಹತ್ತರವಾದ ವಿಷಯವನ್ನು ಬಹಿರಂಗಪಡಿಸುವುದಾಗಿ ಸಾವಿತ್ರಿ ಬಾಯಿ ಫುಲೆ ಹೇಳಿದ್ದಾರೆ. ಶ್ರೀರಾಮನಿಗಾಗಿ ಹನುಮಾನ್ ಎಲ್ಲ ಸೇವೆಯನ್ನೂ ಮಾಡಿದ. ಆದರೂ ಅವನನ್ನು ಏಕೆ ವಾನರನನ್ನಾಗಿ ಮಾಡಲಾಯಿತು. ಅವನಿಗೇಕೆ ಬಾಲ ಇತ್ತು ಮತ್ತು ಅವನ ಮುಖವೇಕೆ ಕಪ್ಪಾಗಿತ್ತು ಎಂದು ಅವರು ಪ್ರಶ್ನಿಸಿ ಸಾವಿತ್ರಿ ಬಾಯಿ ಫುಲೆ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲದೇ ಅಯೋಧ್ಯೆಯ ವಿವಾದಿತ ಜಾಗದಲ್ಲಿ ಭಗವಾನ್ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com