ಭದ್ರತೆಯಿಲ್ಲದೆ ಹೊರ ಬರುತ್ತೇನೆ ಬನ್ನಿ, ನನ್ನನ್ನು ಸಾಯಿಸಿ: ರಾಜಾ ಸಿಂಗ್'ಗೆ ಓವೈಸಿ

ಭದ್ರತೆಯಿಲ್ಲದೆ ಹೊರ ಓಡಾಡುತ್ತೇನೆ. ಬನ್ನಿ, ನನ್ನನ್ನು ಸಾಯಿಸಿ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಹೇಳಿದ್ದಾರೆ...
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಹೈದರಾಬಾದ್: ಭದ್ರತೆಯಿಲ್ಲದೆ ಹೊರ ಓಡಾಡುತ್ತೇನೆ. ಬನ್ನಿ, ನನ್ನನ್ನು ಸಾಯಿಸಿ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾಜಾ ಸಿಂಗ್ ಅವರು, ಭದ್ರತೆಯಿಲ್ಲದೆ ಹೊರಬಂದು ನನ್ನನ್ನೊಂದಿಗೆ 15 ನಿಮಿಷಗಳು ಹೋರಾಡಿ ಎಂದು ಸವಾಲು ಹಾಕಿದ್ದರು. 
ಈ ಸವಾಲಿಗೆ ಪ್ರತಿಕ್ರಿಯೆ ನೀಡಿರುವ ಓವೈಸಿ, ಕಳೆದ 25 ವರ್ಷಗಳಿಂದ ನಾನು ಒಬ್ಬ ಭದ್ರತಾ ಸಿಬ್ಬಂದಿಯನ್ನು ಹೊಂದಿಲ್ಲ. ಒಬ್ಬೊಂಟಿಯಾಗಿಯೇ ಓಡಾಡುತ್ತಿದ್ದೇನೆ. ನನ್ನಲ್ಲಿರುವ ಹಲವು ಕಾರಣಗಳಿಂದಲೇ ನಾನು ಈಗಾಗಲೇ ಸತ್ತು ಹೋಗಿದ್ದೇನೆ. ಇದೀಗ ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.
ರಾಜಾ ಸಿಂಗ್ ಯಾವ ರೀತಿಯ ಭಾಷೆಯನ್ನು ಮಾತನಾಡುತ್ತಿದ್ದಾರೆ. ಪ್ರಧಾನಮಂತ್ರಿಗಳಿಗೆ ಇದೇ ರೀತಿಯ ಭಾಷೆಯನ್ನು ನಾನು ಬಳಕೆ ಮಾಡಿದ್ದೇನೆಯೇ? ನೀವೇ ಹಿಂದು-ಮುಸ್ಲಿಂ ಆಗಿ ಪರಿವರ್ತಿಸಿ, ನನ್ನನ್ನು ಪಾಕಿಸ್ತಾನದೊಂದಿಗೆ ಸಂಬಂಧವಿದೆ ಎಂದು ಹೇಳುತ್ತಿದ್ದೀರಿ. ಲಷ್ಕರ್-ಇ-ತೊಯ್ಬಾ ಏಜೆಂಟ್ ಎಂದು ಬಿಂಬಿಸಿದ್ದೀರಿ. ಬಿನ್ ಲಾಡೆನ್ ಸ್ನೇಹಿತನೆಂದು ಹೇಳುತ್ತೀರಿ ಎಂದು ತಿಳಿಸಿದ್ದಾರೆ. 
ಡಿ.7 ರಂದು ಹೈದರಾಬಾದ್ ಹೆಮ್ಮೆವೇನೆಂಬುದು ಎಲ್ಲರಿಗೂ ತಿಳಿಯಲಿದೆ. ರಾಜಕೀಯ ದ್ವೇಷ, ಬೆದರಿಕೆಗಳನ್ನು ಜನರು ತಿರಸ್ಕರಿಸುತ್ತಾರೆ. ಇಂತಹವರಿಗೆ ತಕ್ಕ ಪಾಠವನ್ನೇ ಜನರು ಕಲಿಸುತ್ತಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ನನ್ನ ವಿರುದ್ಧವಿದೆ. ಎಐಎಂಐಎಂ ನಿಯಂತ್ರಿಸಲು ಎರಡೂ ಪಕ್ಷಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. 
ಇದೇ ವೇಳೆ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಹುಟ್ಟಿನಿಂದಲೇ ಯೋಗಿ ಅವರಂತೆ ಕೇವಲ ಭಾರತೀಯನಷ್ಟೇ ಅಲ್ಲ, ಆಯ್ಕೆಯಲ್ಲೂ ನಾನು ಭಾರತೀಯನೇ. ಜಿನ್ಹಾ ಸಿದ್ಧಾಂತವನ್ನು ನಾವು ತಿರಸ್ಕರಿಸಿದ್ದೇವೆ. ಭಾರತವನ್ನು ನಮ್ಮ ಭೂಮಾತೆಯೆಂದು ಒಪ್ಪಿಕೊಂಡಿದ್ದೇವೆ. ಸೆಕೆಂಡ್ ಕ್ಲಾಸ್ ನಾಗರೀಕರಂತೆ ನೀವು ನಮ್ಮೊಂದಿಗೆ ನಡೆದುಕೊಳ್ಳಬಾರದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com