ಜಮ್ಮು-ಕಾಶ್ಮೀರ: ಕಾಂಗ್ರೆಸ್ ಮುಖಂಡ ಪರ್ದೀಪ್ ಸಿಂಗ್ ಪರಿಹರ್ ಸೇರಿ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ಮುಖಂಡರೊಬ್ಬರು ಸೇರಿದಂತೆ ಕಿಸ್ತಾವಾರ್ ನಿಂದ ಅನೇಕ ರಾಜಕೀಯ ನಾಯಕರು ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಾಗಿ ಶಪಥ ಗೈದಿದ್ದಾರೆ ಎಂದು ಬಿಜೆಪಿ ಪಕ್ಷದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಕಾಂಗ್ರೆಸ್ ಮುಖಂಡರೊಬ್ಬರು ಸೇರಿದಂತೆ ಕಿಸ್ತಾವಾರ್ ನಿಂದ ಅನೇಕ ರಾಜಕೀಯ ನಾಯಕರು ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಾಗಿ ಶಪಥ ಗೈದಿದ್ದಾರೆ ಎಂದು ಬಿಜೆಪಿ ಪಕ್ಷದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್  ಮುಖಂಡ ಪರ್ದೀಪ್ ಸಿಂಗ್ ಪರಿಹಾರ್, ಮಾಜಿ ಟ್ರೇಡ್ ಯೂನಿಯನ್ ಮುಖಂಡ ಸುರೇಶ್ ಶರ್ಮಾ   ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಿಂದ 8  ಹಾಗೂ ಪಿಡಿಪಿಯಿಂದ ಹಲವು ನಾಯಕರು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರದ ಸದೃಢ ನೀತಿಗಳಿಂದ ಪ್ರೇರಿತರಾಗಿ ಇಂದು ಪ್ರತಿಯೊಬ್ಬ ರಾಷ್ಟ್ರೀಯವಾದಿಗಳು ಬಿಜೆಪಿ ಸೇರುತ್ತಿದ್ದಾರೆ ಎಂದು ಕೇಂದ್ರ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.
ಸಮಾಜದಲ್ಲಿ ನಿರ್ಲಕ್ಷಿತಕ್ಕೊಳಗಾದ ಎಲ್ಲಾ ವರ್ಗಗಳನ್ನು ಮೇಲೆತ್ತೆಲು  ಕೇಂದ್ರಸರ್ಕಾರ ಪ್ರಯತ್ನ ಪಡುತ್ತಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ  ವಿಶ್ವ ಭೂಪಟದಲ್ಲಿ ಭಾರತದ ಸ್ಥಾನಮಾನ ಮಹತ್ವದ ರೀತಿಯಲ್ಲಿ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಸಬ್ ಕಾ ಸಾಥ್, ಸಾಬ್ ಕಾ ವಿಕಾಸ ನೀತಿ ಇತರ ಪಕ್ಷಗಳ  ನಾಯಕರನ್ನು ಆಕರ್ಷಿಸುತ್ತಿದೆ . ಬಿಜೆಪಿಯ ಎಲ್ಲಾ ನಾಯಕರು ಸ್ವಚ್ಛ ಮನಸ್ಸಿನೊಂದಿಗೆ ದೇಶ ಸೇವೆ ಮಾಡಲು ಮನಸ್ಸು ಹೊಂದಿರುವುದಾಗಿ  ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವಿಂದರ್ ರೈನಾ  ಹೇಳಿದ್ದಾರೆ.
ಈ ಮಧ್ಯೆ ಮುಂಬರುವ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ ರೈನಾ, ಜನರ ಬಳಿ ಹೋಗಲು ಕ್ಷೇತ್ರ ವ್ಯಾಪ್ತಿಯಲ್ಲಿ ತಂಡ ರಚಿಸುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.
ಹಿರಿಯ ಮುಖಂಡರು ಈ ತಂಡದಲ್ಲಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗಳಲ್ಲಿ  ಬಿಜೆಪಿಯನ್ನು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಲು ಶ್ರಮಿಸುವಂತೆ ಅವರು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com