ಹಳೇ ಗ್ರಾಮಾಫೋನ್‌ ಹೇಳಿಕೆ: ಮೋದಿಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರನ್ನು ಹೇಳಿದ್ದನ್ನೇ ಹೇಳುವ ದುರಸ್ತಿಯಾಗಬೇಕಿರುವ ಗ್ರಾಮಾಫೋನ್ ಗೆ ಹೋಲಿಕೆ ಮಾಡಿದ್ದ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಟೀಕೆಗೆ ಟ್ವಿಟರ್ ನಲ್ಲಿ ಉತ್ತರ ನೀಡಿರುವ ರಾಹುಲ್ ಗಾಂಧಿ, ಮೋದಿ ಅವರೂ ಪದೇ ಪದೇ ಗಾಂಧಿ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳನ್ನೇ ಹೇಳುತ್ತಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದು " ಮಿ.36 ಅರ್ಪಿಸುವ ಮನರಂಜನೆಯ ವಿಡಿಯೋವನ್ನು ನೋಡಿ ಆನಂದಿಸುವಿರಿ, ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರಿಗೂ ಹಂಚಿಕೊಳ್ಳುವಂತೆ ಹೇಳಿ ಅವರೂ ಮನರಂಜನೆ ಪಡೆಯಲಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 
ಬಿಜೆಪಿ ನಾಯಕರೊಂದಿಗಿನ ಸಂವಾದದಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವುದರ ಬಗ್ಗೆ ವ್ಯಂಗ್ಯವಾಡಿದ್ದ ಪ್ರಧಾನಿ ರಾಹುಲ್ ಗಾಂಧಿ, ದುರಸ್ತಿಯಾಗಬೇಕಿರುವ ಹಳೆಯ ಗ್ರಾಮಾಫೋನ್ ಇದ್ದಂತೆ ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರುತ್ತಾರೆ, ಅವರ ಬಾಲಿಶ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com