ವಿರೋಧ ಪಕ್ಷಗಳು ಮೊದಲು ಪ್ರಧಾನಮಮಂತ್ರಿ ಅಭ್ಯರ್ಥಿ ಘೋಷಿಸಲಿ: ಬಿಜೆಪಿ ಸವಾಲು

2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಷಡ್ಯಂತ್ರ ರೂಪಿಸುವ ಸಲುವಾಗಿ ಮಹಾಸಭೆ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಸವಾಲು ಹಾಕಿರುವ ಬಿಜೆಪಿ, ವಿರೋಧ ಪಕ್ಷಗಳು ಮೊದಲು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ...
ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕೋಲ್ಕತಾ: 2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಷಡ್ಯಂತ್ರ ರೂಪಿಸುವ ಸಲುವಾಗಿ ಮಹಾಸಭೆ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಸವಾಲು ಹಾಕಿರುವ ಬಿಜೆಪಿ, ವಿರೋಧ ಪಕ್ಷಗಳು ಮೊದಲು ತಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಸೋಮವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದು ಒಳ್ಳೆಯ ವಿಚಾರ. ಆದರೆ, ವಿರೋಧ ಪಕ್ಷಗಳು ಮೊಂದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಎದುರಿಸಲಿರುವ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಮೊದಲು ಘೋಷಣೆ ಮಾಡಲಿ. ನಂತರ ಅವರು ನಮ್ಮನ್ನು ಸೋಲಿಸುವ ಕನಸು ಕಾಣಬಹುದು ಎಂದು ಹೇಳಿದ್ದಾರೆ. 
2019ರ ಲೋಕಸಭಾ ಚುನಾವಣೆಯಲವ್ಲಿ ಬಿಜೆಪಿ ವಿರುದ್ಧ ಹೋರಾಡಲು ಪ್ರಬಲ ಮೈತ್ರಿಕೂಟ ರಚನೆಗೆ ಯತ್ನ ನಡೆಸುತ್ತಲೇ ಇರುವ ವಿರೋಧ ಪಕ್ಷಗಳು, ಕಾರ್ಯತಂತ್ರ ರಚನೆಯ ನಿಟ್ಟಿನಲ್ಲಿ ಇಂದು ರಾಜಧಾನಿ ದೆಹಲಿಯಲ್ಲಿ ಸಭೆಯೊಂದನ್ನು ನಡೆಸಲಿದೆ. ಸಭೆಯ ನೇತೃತ್ವವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ವಹಿಸಿಕೊಂಡಿದ್ದಾರೆ. 
ಕಳೆದ ನ.22 ರಂದೇ ಈ ಸಭೆಯನ್ನು ಆಯೋಜಿಸಲಾಗಿತ್ತಾದರೂ, ಆ ಸಂದರ್ಭದಲ್ಲಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ವಿವಿಧ ಪಕ್ಷಗಳ ನಾಯಕರು ಕಾರ್ಯನಿರತರಾಗಿದ್ದ ಕಾರಣ ಡಿ.11ಕ್ಕೆ ಮುಂದೂಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com